ಚಿಕ್ಕಮಗಳೂರು: ಅನೈತಿಕ ಸಂಬಂಧ ವಿಚಾರ ಬಯಲಾಗುತ್ತಿದ್ದಂತೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಡೂರು ಪೊಲೀಸರು 55 ವರ್ಷದ ಮೀನಾಕ್ಷಿ ಹಾಗೂ 33 ವರ್ಷದ ಪ್ರದೀಪ್ ನನ್ನು ಬಂಧಿಸಿದ್ದಾರೆ. 55 ವರ್ಷದ ಮೀನಾಕ್ಷಿ ಹಾಗೂ 33 ವರ್ಷದ ಪ್ರದೀಪ್ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಗೊತ್ತಾಗುತ್ತದೆ ಎಂಬ ಆತಂಕದಲ್ಲಿ ಪತಿಯ ಹತ್ಯೆಗೆ ಮೀನಾಕ್ಷೆ ಪ್ಲಾನ್ ಮಾಡಿದ್ದಳು. ಪತಿ ಸುಬ್ರಹ್ಮಣ್ಯನನ್ನು ಹತ್ಯೆ ಮಾಡುವಂತೆ ಪ್ರದೀಪ್ ಗೆ ತಿಳಿಸಿದ್ದಳಂತೆ.
ಪ್ರಿಯತಮೆಯ ಸೂಚನೆಯಂತೆ ತನ್ನ ಸ್ನೇಹಿತರ ಜೊತೆ ಸೇರಿ ಪ್ರದೀಪ್ ಸುಬ್ರಹ್ಮಣ್ಯನನ್ನು ಮುಗಿಸಿದ್ದಾರೆ. ಬಳಿಕ ಜೂನ್ ೨ರಂದು ಗಂಡ ನಾಪತ್ತೆಯಾಗಿದ್ದಾನೆ ಎಂದು ಮೀನಾಕ್ಷಿ ದೂರು ದಾಖಲಿಸಿದ್ದಳು. ಪ್ರದೀಪ್ ತಾಯಿಯ ಮೊಬೈಲ್ ಮೂಲಕ ಸಂಪರ್ಕಿಸಿದ್ದಳು. ಪೊಲೀಸರಿಗೆ ತನ್ನ ಪ್ಲಾನ್ ಗೊತ್ತಾಗದಂತೆ ಎರಡು ತಿಂಗಳಿಂದ ಬಚಾವ್ ಆಗಿದ್ದಳು. ಆದರೆ ಕಡೂರು ಪೊಲೀಸರು ಆರೋಪಿಗಳಾದ ಪ್ರದೀಪ್, ಸಿದ್ದೇಶ್, ವಿಶ್ವಾಸ್ ನನ್ನು ಬಂಧಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ ಮೀನಾಕ್ಷಿ ಪತಿಯನ್ನು ಹತ್ಯೆಗೈಯ್ಯಲು ಸೂಚಿಸಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಹಣವ ವ್ಯವಹಾರ ವಿಚಾರವಾಗಿ ಹತ್ಯೆ ಮಾಡಿದ್ದಾಗಿ ಪ್ರದೀಪ್ ಬಾಯ್ಬಿಟ್ಟಿದ್ದಾನೆ. ಇದೀಗ ಕಡೂರು ಪೊಲಿಸರು ಪತ್ನಿ ಮೀನಾಕ್ಷಿಯನ್ನು ಬಂಧಿಸಿದ್ದಾರೆ.