ಎಟಿಎಂ ಯಂತ್ರ ಒಡೆದು 14 ಲಕ್ಷ ರೂ. ದೋಚಿದ ಖದೀಮರು

ಚಿಕ್ಕಮಗಳೂರು: ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಒಡೆದು 14 ಲಕ್ಷ ರೂ. ದರೋಡೆ ಮಾಡಲಾಗಿದೆ.

ಬೇಲೂರಿನಿಂದ ಮಂಗಳವಾರ ರಾತ್ರಿ ಕಾರ್ ಕಳವು ಮಾಡಿಕೊಂಡು ಬಂದಿದ್ದ ದರೋಡೆಕೋರರು ಎಟಿಎಂ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಕಾರ್ ನಿಲ್ಲಿಸಿದ್ದಾರೆ. ಮಂಕಿ ಕ್ಯಾಪ್ ಹಾಕಿಕೊಂಡು ಎಟಿಎಂ ಒಳಗೆ ನುಗ್ಗಿದ್ದಾರೆ. ಸಿಸಿಟಿವಿ ಕ್ಯಾಮೆರಾಕ್ಕೆ ಸ್ಪ್ರೇ ಬಳಸಿ ನಿಷ್ಕ್ರಿಯಗೊಳಿಸಿದ್ದಾರೆ.

ಎಟಿಎಂ ಶೆಲ್ಟರ್ ಎಳೆದು ಯಂತ್ರವನ್ನು ಒಡೆದು ಹಾಕಿ ಅದರಲ್ಲಿದ್ದ 14 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ಎಟಿಎಂಗೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಕಾರ್ ಮತ್ತು ಅದರಲ್ಲಿ ಬಂದಿದ್ದ ಮೂವರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರ್ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅದು ಕಳುವಾಗಿರುವ ಕಾರ್ ಎಂದು ಗೊತ್ತಾಗಿದ್ದು, ಪೊಲೀಸರು ಹಣ ದೋಚಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read