ಚಿಕ್ಕಮಗಳೂರು: ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ತಿಂಗಳಿಂದ ನಿಂತಿದ್ದ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಬಳಿ ನಿಲ್ಲಿಸಿದ ಸೀಜ್ ಆದ ಕಾರಿನಲ್ಲ್ ಲಕ್ಷಾಂತರ ರೂಪಾಯಿ ಹಣ, ಚಿನ್ನ. ಬೆಳ್ಳಿ ಪತ್ತೆಯಾಗಿದೆ.
ಮಾಜಿ ಸಚಿವ ಗೋವಿಂದೇಗೌಡ ಅವರ ಮನೆಯಲ್ಲಿ ನಡೆದಿದ್ದ ಕಳ್ಲತನ ಪ್ರಕರಣ ಸಂಬಂಧನೇಪಾಳಿ ಗ್ಯಾಂಗ್ ನ್ನು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗಳು ಎಸ್ಕೇಪ್ ಆಗಲು ಬಳಸಿದ್ದ ಕಾರನ್ನು ಸೀಜ್ ಮಾಡಲಾಗಿತ್ತು. ಆದರೆ ಈಗ ಕೋರ್ಟ್ ಕಾರನ್ನು ರಿಲೀಸ್ ಮಾಡಲು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ಪರುಶೀಲನೆ ನಡೆಸುತ್ತ್ದ್ದ ವೇಳೆ ಕಾರಿನಲ್ಲಿ ಕಂತೆ ಕಂತೆ ಹಣ, ಚಿನ್ನ, ಬೆಳ್ಲಿ ಪತ್ತೆಯಾಗಿದೆ.
ಕಾರಿನ ಸೀಟ್ ಅಡಿ 595 ಗ್ರಾಂ ಚಿನ್ನ 589ಗ್ರಾಂ ಬೆಳ್ಳಿ, 3,41,150 ರೂ ಹಣ ಪತ್ತೆಯಾಗಿದೆ. ಈ ಗ್ಯಾಂಗ್ ಇನ್ನು ಹಲವೆಡೆ ಕಳ್ಳತನವೆಸಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆದಿದೆ.
