BIG NEWS: ಇಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ; ಬೃಹತ್ ಶೋಭಾ ಯಾತ್ರೆಗೆ ಸಿದ್ಧತೆ; ಜಿಲ್ಲೆಯಾದ್ಯಂತ ಕಟ್ಟೆಚ್ಚರ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಇಂದು ದತ್ತ ಜಯಂತಿ ನಡೆಯಲಿದ್ದು ಹೋಮ-ಹವನ, ವಿಶೇಷ ಪೂಜೆಗಳು ನೆರವೇರಲಿವೆ.

ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹರಿದುಬರುತ್ತಿದ್ದಾರೆ. ಇಂದು ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದ್ದು, ಜಿಲ್ಲೆಯಾದ್ಯಂತ ಖಾಕಿ ಕಟ್ಟೆಚ್ಚರವಹಿಸಿದೆ.

ಭದ್ರತೆಗಾಗಿ ಜಿಲ್ಲೆಯಾದ್ಯಂತ 4000 ಪೊಲೀಸರನ್ನು ನಿಯೋಜಿಸಲಾಗಿದೆ. ಶ್ರೀರಾಮಸೇನೆ, ಬಜರಂಗದಳ, ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ದತ್ತ ಜಯಂತಿ ಆಚರಣೆ ನಡೆಯುತ್ತಿದೆ.

ದತ್ತಪೀಠದ 200 ಮೀ ವ್ಯಾಪ್ತಿಯಲ್ಲಿ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇನ್ನು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಚಿಕ್ಕಮಗಳೂರಿಗೆ ನಿರ್ಬಂಧಿಸಲಾಗಿದೆ.

ಜಿಲ್ಲೆಯ ಗಡಿ ಭಾಗ ಸೇರಿ 26 ಚೆಕ್ ಪೋಸ್ಟ್ ಗಳನ್ನು 49 ಸೆಕ್ಟರ್ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read