ಚಿಕ್ಕಬಳ್ಳಾಪುರ: ಸೋದರ ಮಾವನ ಮಗಳು ತನ್ನನ್ನು ವಿವಾಹವಾಗಲು ನಿರಾಕರಸಿದಳು ಎಂಬ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಜ್ಜವಾರ ಗ್ರಮದಲ್ಲಿ ನಡೆದಿದೆ.
ಮಂಜುನಾಥ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಜುನಾಥ್ ತನ್ನ ಸೋದರಮಾವನ ಅಪ್ರಾಪ್ತ ಮಗಳನ್ನು ಪ್ರೀತಿಸುತ್ತಿದ್ದ. ನಿನ್ನೆ ಆಕೆಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮನೆಗೆ ಹೋಗಿ ಶುಭಕೋರಿ ಬಂದಿದ್ದ. ಈ ವೇಳೆ ಆಕೆಯನ್ನು ಮದುವೆಯಾಗುವುದಾಗಿ ಕೇಳಿದ್ದ. ಅದಕ್ಕೆ ಯುವತಿ ಹಾಗೂ ಆಕೆಯ ತಂದೆ-ತಾಯಿ ನಿರಾಕರಿಸಿದ್ದಾರೆ.
ಬೇಸರದಿಂದ ಮನೆಗೆ ಬಂದವವನು ಬೆಳಗಾಗುವಷ್ಟರಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.