ಮತದಾನೋತ್ತರ ಸಮೀಕ್ಷೆ: ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ

ನವದೆಹಲಿ: ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿವೆ.

ಸಿ ವೋಟರ್ ಸಮೀಕ್ಷೆ ಪ್ರಕಾರ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ 41 -53 ಸ್ಥಾನಗಳಲ್ಲಿ ಜಯಗಳಿಸಲಿದೆ. ಬಿಜೆಪಿಗೆ 36 -48 ಸ್ಥಾನಗಳು ಲಭಿಸಲಿದೆ. ಸಿ ವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಬಹುಮತ ಗಳಿಸುವ ಸಾಧ್ಯತೆ ಇದೆ

ಟುಡೇಸ್ ಚಾಣಕ್ಯ ಸಮೀಕ್ಷೆ ಪ್ರಕಾರ ಬಿಜೆಪಿಗೆ 33 -41 ಸ್ಥಾನ, ಇತರರಿಗೆ 0-3 ಸ್ಥಾನ, ಕಾಂಗ್ರೆಸ್ ಪಕ್ಷಕ್ಕೆ 57 – 65 ಸ್ಥಾನಗಳಲ್ಲಿ ಜಯಗಳಿಸಲಿದೆ.

ಎಬಿಪಿ ಸಮೀಕ್ಷೆಯ ಪ್ರಕಾರ ಛತ್ತೀಸ್ ಗಢದಲ್ಲಿ ಅತಂತ್ರ ಫಲಿತಾಂಶ ಬರಲಿದೆ. ಬಿಜೆಪಿ 36 – 48, ಕಾಂಗ್ರೆಸ್ 41 -53 ಸ್ಥಾನ ಗಳಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read