SHOCKING: ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾದ ಟೆಕ್ಕಿ ವಿದ್ಯುತ್ ಸ್ಪರ್ಶಿಸಿಕೊಂಡು ಸಾವು

ಚೆನ್ನೈ: ಪುಣೆಯ ಇವೈ ಎಕ್ಸಿಕ್ಯೂಟಿವ್‌ ಕೆಲಸದ ಒತ್ತಡದ ಸಾವಿನ ಪ್ರಕರಣದ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಕೆಲಸದ ಹೊರೆಯಿಂದಾಗಿ ಸಾಫ್ಟ್‌ ವೇರ್ ಇಂಜಿನಿಯರ್ ಗುರುವಾರ ರಾತ್ರಿ ಚೆನ್ನೈನಲ್ಲಿ ಸ್ವಯಂ-ವಿದ್ಯುತ್ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

38 ವರ್ಷದ ಕಾರ್ತಿಕೇಯನ್ ಮೃತಪಟ್ಟವರು. ಅವರು ತನ್ನ ಕಂಪನಿಯಲ್ಲಿನ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು.

ಪೊಲೀಸರ ಪ್ರಕಾರ, ಟೆಕ್ಕಿ ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ, ಅವನ ಹೆಂಡತಿ ಮನೆಗೆ ಬಂದಾಗ ಆತನ ದೇಹ ವೈರ್‌ಗಳಿಂದ ಸುತ್ತಿತ್ತು.

ಟೆಕ್ಕಿ ಕಾರ್ತಿಕೇಯನ್ ತನ್ನ ಪತ್ನಿ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಅವರು ಕೆಲಸದ ಒತ್ತಡದ ಪರಿಣಾಮವಾಗಿ ಚೆನ್ನೈನ ಮೆಡವಕ್ಕಂನಲ್ಲಿರುವ ಆಸ್ಪತ್ರೆಯಲ್ಲಿ ಖಿನ್ನತೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು.

ಆತನ ಪತ್ನಿ ತನ್ನ ಸ್ನೇಹಿತರೊಂದಿಗೆ ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳಿದ್ದಳು. ಗುರುವಾರ ರಾತ್ರಿ ಮನೆಗೆ ಹಿಂದಿರುಗಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿದೆ. ಹಲವಾರು ಬಾರಿ ಬಡಿದ ನಂತರ, ಅವಳು ಬಾಗಿಲು ತೆರೆದಾಗ ಪತಿ ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾದಳು. ಕೂಡಲೇ ಆಕೆ ಗಾಬರಿಯಿಂದ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೇವಲ ಒಳ ಉಡುಪಿನಲ್ಲಿದ್ದ ಕಾರ್ತಿಕೇಯನ್ ಸಂಪೂರ್ಣ ದೇಹವು ತಂತಿಗಳಿಂದ ಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಆತನ ಈ ಕ್ರಮದ ಹಿಂದಿನ ಇತರ ಕಾರಣಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read