ಕಳೆದ ತಿಂಗಳು ಜೂನ್ 24ರಂದು ತೆರೆ ಕಂಡಿದ್ದ ‘ಚೆಫ್ ಚಿದಂಬರ’ ಚಿತ್ರ ರಾಜ್ಯದಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಚೆಫ್ ಚಿದಂಬರ ಚಿತ್ರತಂಡ ಇಂದು ‘ಹಲೋ ಹಲೋ’ ಎಂಬ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಐಶ್ವರ್ಯ ರಂಗರಾಜನ್ ಧ್ವನಿಯಾಗಿರುವ ಈ ಹಾಡಿಗೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ನೀಡಿದ್ದು, ವಿನಯ್ ಪಾಂಡವಪುರ ಸಾಹಿತ್ಯವಿದೆ.
ಎಂ ಆನಂದ್ ರಾಜ್ ನಿರ್ದೇಶನದ ಈ ಚಿತ್ರವನ್ನು ರೂಪಾ ಡಿ ಎನ್ ನಿರ್ಮಾಣ ಮಾಡಿದ್ದು, ಅನಿರುದ್ ಜಟ್ಕರ್, ರಾಚೆಲ್ ಡೇವಿಡ್, ನಿಧಿ ಸುಬ್ಬಯ್ಯ ಪ್ರಮುಖ ಪಾತ್ರದಲ್ಲಿದ್ದಾರೆ. ವಿಜೇತ್ ಚಂದ್ರ ಸಂಕಲನ, ಶ್ರೀ ಗಣೇಶ್ ಪರಶುರಾಮ್ ಸಂಭಾಷಣೆ ಹಾಗೂ ಉದಯ್ಲೀಲಾ ಛಾಯಾಗ್ರಹಣವಿದೆ.
https://twitter.com/A2MusicSouth/status/1808029190844739896