ಎಲ್ಲರೂ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೊರಿಯನ್ ಅವರ ಚರ್ಮದ ಹೊಳಪು ಎಂತವರನ್ನು ಅವರ ಕಡೆ ಆಕರ್ಷಿಸುತ್ತದೆ. ಹಾಗಾಗಿ ಎಲ್ಲರೂ ಕೊರಿಯನ್ ಅವರ ಚರ್ಮದ ಕಾಂತಿಯನ್ನು ಪಡೆಯಲು ಬಯಸುವುದು ಸಹಜ. ಕೊರಿಯನ್ ಚರ್ಮದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ಅವರು ಚರ್ಮದ ಕಾಂತಿಗಾಗಿ ಹಾಗೂ ಚರ್ಮದಲ್ಲಿನ ಸುಕ್ಕುಗಳನ್ನು ನಿವಾರಿಸಲು ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಬಳಸುತ್ತಾರಂತೆ. ಹಾಗಾದ್ರೆ ಈ ಕೊರಿಯನ್ ಬಳಸುವಂತಹ ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ.
ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ನ ಪ್ರಯೋಜನಗಳು:
ಅಕ್ಕಿಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ಇದು ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಯಾಕೆಂದರೆ ಇದು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ, ಮತ್ತು ಅಕ್ಕಿ ಹಿಟ್ಟಿನಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳ ಸಹಾಯದಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದರಿಂದ ನೀವು ಹೊಳೆಯುವ ಮೈಕಾಂತಿಯನ್ನು ಪಡೆಯಬಹುದು. ಮತ್ತು ಇದು ಚರ್ಮದ ಬಿರುಕುಗಳನ್ನು ಕಡಿಮೆ ಮಾಡುತ್ತದೆ.
ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ: 2 ಟೀಸ್ಪೂನ್ ಅಕ್ಕಿ ಹಿಟ್ಟು, 2 ಟೀಸ್ಪೂನ್ ಹಾಲು, 1 ಟೀಸ್ಪೂನ್ ಜೇನುತುಪ್ಪ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಹಾಲು ಮತ್ತು ಜೇನುತುಪ್ಪವನ್ನು ನಯವಾಗುವವರೆಗೆ ಮಿಶ್ರಣ ಮಾಡಿ. ಕಣ್ಣಿನ ಸ್ಥಳವನ್ನು ಬಿಟ್ಟು ಪ್ಯಾಕ್ ಅನ್ನು ನಿಮ್ಮ ಇಡೀ ಮುಖಕ್ಕೆ ಸರಿಯಾಗಿ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚಿ.