‘ಚಾರ್ಲಿ ಚಾಪ್ಲಿನ್’ ಪುತ್ರಿ ಜೋಸೆಫಿನ್ ಚಾಪ್ಲಿನ್ ವಿಧಿವಶ

 ಕಾಮಿಡಿ ದಂತಕಥೆ, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಮತ್ತು ನಟಿ ಜೋಸೆಫೀನ್ ಚಾಪ್ಲಿನ್ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಅವರ ಕುಟುಂಬದವರ ಮಾಹಿತಿ ಪ್ರಕಾರ ನಟಿ ಜೋಸೆಫೀನ್ ಚಾಪ್ಲಿನ್ ಅವರು ಜುಲೈ 13 ರಂದು ಪ್ಯಾರಿಸ್ ನಲ್ಲಿ ನಿಧನರಾಗಿದ್ದಾರೆಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು. ಅವರು ತನ್ನ ತಂದೆ ಚಾಪ್ಲಿನ್ ನವರ 1952 ರ ‘ಲೈಮ್‌ಲೈಟ್’ ನಲ್ಲಿ ಚಿಕ್ಕ ವಯಸ್ಸಿನಲ್ಲೇ ತೆರೆಯ ಮೇಲೆ ಕಾಣಿಸಿಕೊಂಡು ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆನಂತರ ಅವರು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು.

ಮೃತ ಜೋಸೆಫೀನ್ ಚಾಪ್ಲಿನ್ ತನ್ನ ಮೂವರು ಗಂಡು ಮಕ್ಕಳಾದ ಚಾರ್ಲಿ, ಆರ್ಥರ್ ಮತ್ತು ಜೂಲಿಯನ್ ರೋನೆಟ್ ಸೇರಿದಂತೆ ತಮ್ಮ ಒಡಹುಟ್ಟಿದವರಾದ ಮೈಕೆಲ್, ಜೆರಾಲ್ಡಿನ್, ವಿಕ್ಟೋರಿಯಾ, ಜೇನ್, ಆನೆಟ್, ಯುಜೀನ್ ಮತ್ತು ಕ್ರಿಸ್ಟೋಫರ್ ನನ್ನು ಅಗಲಿದ್ದಾರೆ.

1972 ರಲ್ಲಿ ಪಿಯರ್ ಪಾವೊಲೊ ಪಸೊಲಿನಿ ಅವರ ಪ್ರಶಸ್ತಿ ವಿಜೇತ ಚಲನಚಿತ್ರ ‘ದಿ ಕ್ಯಾಂಟರ್ಬರಿ ಟೇಲ್ಸ್’ ಮತ್ತು ರಿಚರ್ಡ್ ಬಾಲ್ಡುಸಿಯ ‘ಎಲ್’ಒಡೆರ್ ಡೆಸ್ ಫೌವ್ಸ್’ನಲ್ಲಿ ಜೋಸೆಫೀನ್ ಕಾಣಿಸಿಕೊಂಡರು. ಅದೇ ವರ್ಷ ಮೆನಾಹೆಮ್ ಗೋಲನ್ ಅವರ 1972 ರ ನಾಟಕ ‘ಎಸ್ಕೇಪ್ ಟು ದಿ ಸನ್ ಯೂನಿಯನ್’ ನಲ್ಲಿ ಲಾರೆನ್ಸ್ ಹಾರ್ವೆ ಅವರೊಂದಿಗೆ ನಟಿಸಿದರು. ನಂತರ 1984 ರಲ್ಲಿ ಅವರು ಕೆನಡಾದ ನಾಟಕ ‘ದಿ ಬೇ ಬಾಯ್’ ನಲ್ಲಿ ನಟಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read