ಕೋಲಾರ: ಚಪಾತಿ ಹಿಟ್ಟು ಕಲೆಸುವ ಯಂತ್ರಕ್ಕೆ ಸಿಲುಕಿ ಅಡುಗೆ ಸಹಾಯಕಿಯ ಕೈ ಕಟ್ ಆಗಿರುವ ಘಟನೆ ಕೋಲಾರದ ಬಿಸಿಎಂ ಹಾಸ್ಟೆಲ್ ನಲ್ಲಿ ನಡೆದಿದೆ.
ಅಡುಗೆ ಸಹಾಯಕಿ ಗಿರಿಜಮ್ಮ ಎಂಬುವವರ ಕೈ ಕಟ್ ಆಗಿದೆ ಕೋಲಾರ ತಾಲೂಕಿನ ಮಂಗಸಂದ್ರ ಬಳಿಯ ಬಿಸಿಎಂ ಹಾಸ್ಟೆಲ್ ನಲ್ಲಿ ಅಡುಗೆ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಗಾಯಾಳು ಗಿರಿಜಮ್ಮ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.