ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಕಾರ್ಯಕ್ರಮದ ಆಯೋಜಕರನ್ನು ಶನಿವಾರ ಬಂಧಿಸಲಾಯಿತು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಮಾನಿಗಳು ಮತ್ತು ಬೆಂಬಲಿಗರಲ್ಲಿ ಕ್ಷಮೆಯಾಚಿಸಿದ ನಂತರ, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ದೊಡ್ಡ ಪ್ರಮಾಣದ ಅವ್ಯವಸ್ಥೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆಯೋಜಕರನ್ನು ಸತಾದ್ರು ದತ್ತ ಎಂದು ಗುರುತಿಸಲಾಗಿದ್ದು, ಅವರು ‘ಸತಾದ್ರು ದತ್ತ ಉಪಕ್ರಮ’ದ ಅಡಿಯಲ್ಲಿ ಮೆಸ್ಸಿ ಕಾರ್ಯಕ್ರಮದ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದರು.
ಶನಿವಾರ ಬೆಳಿಗ್ಗೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿಯ ಉಪಸ್ಥಿತಿಯಿಂದ ಕೋಲ್ಕತ್ತಾ ಕಂಗೊಳಿಸಿತು. ಆದರೆ ಕೆಲಕಾಲ ಆಂತಂಕದ ವಾತಾವರಣ ನಿರ್ಮಾಣವಾಯಿತು. ಮೆಸ್ಸಿ ಕ್ರೀಡಾಂಗಣದಿಂದ ಬೇಗ ನಿರ್ಗಮಿಸಿದ್ದಕ್ಕೆ, ಮೆಸ್ಸಿಯನ್ನು ನೋಡಲು ಆಗಲಿಲ್ಲ ಎಂದು ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಕೋಪಗೊಂಡ ಅಭಿಮಾನಿಗಳು ಬ್ಯಾನರ್ಗಳು ಮತ್ತು ಆಸನಗಳನ್ನು ಧ್ವಂಸಗೊಳಿಸಿದ್ದಾರೆ.
ಅರ್ಜೆಂಟೀನಾದ ದಂತಕಥೆ, ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಬೆಳಗಿನ ಜಾವ ನಗರಕ್ಕೆ ಬಂದಿಳಿದರು. ನಂತರ ಮೂವರು ಆಟಗಾರರು ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಆಗಮಿಸಿದರು, ಮೆಸ್ಸಿ ಕ್ರೀಡಾಂಗಣದ ಸುತ್ತಲೂ ಗೌರವ ಸಲ್ಲಿಸಿದರು.ಮೆಸ್ಸಿ ರಾತ್ರಿ 11 ಗಂಟೆಯೊಳಗೆ ಆಗಮಿಸುವ ನಿರೀಕ್ಷೆಯಿದ್ದರೂ ಅಭಿಮಾನಿಗಳು ಬೆಳಿಗ್ಗೆ 8 ಗಂಟೆಯಿಂದಲೇ ಕ್ರೀಡಾಂಗಣದಲ್ಲಿ ನೆರೆದಿದ್ದರು.
Fans boo officials and politicians, with bottles also thrown, as a security breach forces Lionel Messi to cut short his stadium lap at Salt Lake Stadium. pic.twitter.com/uS9qU8F74v
— Khel Now (@KhelNow) December 13, 2025
#WATCH | Kolkata, West Bengal: Angry fans threw bottles and chairs from the stands at Kolkata's Salt Lake Stadium
— ANI (@ANI) December 13, 2025
Star footballer Lionel Messi has left the Salt Lake Stadium in Kolkata.
More details awaited. pic.twitter.com/mcxi6YROyr
#WATCH | West Bengal: Star footballer Lionel Messi greets his fans at Salt Lake Stadium in Kolkata
— ANI (@ANI) December 13, 2025
A friendly match and a felicitation ceremony will be organised here. #Messi𓃵 #MessiInIndia
(Video Source: DD Sports) pic.twitter.com/BmxhJ7PQAT
