ಕೌಟುಂಬಿಕ ಸುಖ ಪ್ರಾಪ್ತಿಗೆ ಪ್ರತಿದಿನ ಹನುಮಂತನ ಈ ಹೆಸರುಗಳನ್ನು ಜಪಿಸಿ

ಹನುಮಂತನ ಹೆಸರು ಹೇಳಿದ್ರೆ ಭೂತ- ಪ್ರೇತ, ದುಷ್ಟ ಶಕ್ತಿಗಳು ಓಡಿ ಹೋಗುತ್ತವೆ. ಹನುಮಂತನ ಜಪ ಮಾಡುವವರಿಗೆ ಶಕ್ತಿ, ಬುದ್ದಿವಂತಿಕೆ, ಜ್ಞಾನ ಸುಲಭವಾಗಿ ಒಲಿಯುತ್ತದೆ. ಭೂತ- ದೆವ್ವಗಳು ಭಕ್ತನ ಬಳಿ ಸುಳಿಯುವುದಿಲ್ಲ. ಪ್ರತಿಯೊಂದು ಕಷ್ಟವನ್ನು ಹನುಮಂತ ದೂರ ಮಾಡ್ತಾನೆ. ಮಂಗಳವಾರ ಹನುಮಂತನ ಪೂಜೆ ಮಾಡಲು ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗಿದೆ.

ರಾಮ ಭಕ್ತ, ಮಹಾಬಲ, ಮಹಾವೀರ ಹನುಮಾನ್, ಭಜರಂಗಬಲಿ, ಶಂಕರ ಸುಮನ್, ಕೇಸರಿ ನಂದನ, ಅಂಜನಿ ಪುತ್ರ, ಪವನ, ಅಮಿತ ವಿಕ್ರಮ, ಸಮೇಷ್ಠ್, ಲಕ್ಷ್ಮಣ ಈ 12 ಹೆಸರುಗಳನ್ನು ಪ್ರತಿದಿನ ಬೆಳಿಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದೀರ್ಘ ಆಯಸ್ಸು ಲಭಿಸುತ್ತದೆ.

ನಿತ್ಯ ಪೂಜೆ ವೇಳೆ ಹನುಮಂತನ ಈ 12 ಹೆಸರುಗಳನ್ನು ಜಪಿಸುವುದರಿಂದ ಕೌಟುಂಬಿಕ ಸುಖ ಪ್ರಾಪ್ತಿಯಾಗುತ್ತದೆ.

ಬೆಳಿಗ್ಗೆಯೊಂದೇ ಅಲ್ಲ ನಿರಂತರವಾಗಿ ಹನುಮಂತನ ಈ 12 ಹೆಸರುಗಳನ್ನು ಜಪ ಮಾಡುವ ವ್ಯಕ್ತಿಗೆ ಹನುಮಂತ ರಕ್ಷಣೆ ನೀಡ್ತಾನೆ.

ಪ್ರಯಾಣದ ಸಮಯದಲ್ಲಿ ಹಾಗೂ ನ್ಯಾಯಾಲಯದ ವಿವಾದದಲ್ಲಿ ಸಿಲುಕಿರುವವರು ಹನುಮಂತನ ಜಪ ಮಾಡುವುದರಿಂದ ಯಶಸ್ಸು ಲಭಿಸುತ್ತದೆ.

ಮಂಗಳವಾರ ಕಾಗದದ ಮೇಲೆ ಕೆಂಪು ಶಾಯಿಯಲ್ಲಿ 12 ಹೆಸರುಗಳನ್ನು ಬರೆದು ತಾಯತ ಕಟ್ಟಿಕೊಳ್ಳುವುದರಿಂದ ತಲೆನೋವು ಬರುವುದಿಲ್ಲ. ತಾಮ್ರದ ತಾಯತದ ಒಳಗೆ ಹೆಸರು ಬರೆದ ತಾಯತವನ್ನು ಕೈ ಅಥವಾ ಕುತ್ತಿಗೆಗೆ ಕಟ್ಟಿಕೊಳ್ಳುವುದು ಬಹಳ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read