ಚಂದ್ರಯಾನ -3 ಯಶಸ್ವಿ ಕಾರ್ಯಾಚರಣೆಗಾಗಿ ಇಸ್ರೋಗೆ ಐಸ್ಲ್ಯಾಂಡ್ ನ ಹುಸಾವಿಕ್ ನಲ್ಲಿರುವ ಎಕ್ಸ್ಪ್ಲೋರೇಶನ್ ಮ್ಯೂಸಿಯಂನಿಂದ 2023 ರ ಲೀಫ್ ಎರಿಕ್ಸನ್ ಲೂನಾರ್ ಪ್ರಶಸ್ತಿಯನ್ನು ನೀಡಲಾಗಿದೆ.
ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯ ಮೊದಲ ಸಾಫ್ಟ್ ಲ್ಯಾಂಡಿಂಗ್ ಮತ್ತು ಚಂದ್ರನ ಪರಿಶೋಧನೆಯನ್ನು ಮುನ್ನಡೆಸುವಲ್ಲಿ ಮತ್ತು ಆಕಾಶ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಕೊಡುಗೆ ನೀಡುವಲ್ಲಿ ಇಸ್ರೋದ ಅದಮ್ಯ ಚೇತನವನ್ನು ಈ ಪ್ರಶಸ್ತಿ ಆಚರಿಸುತ್ತದೆ ಎಂದು ರೇಕ್ಜಾವಿಕ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪೋಸ್ಟ್ ನಲ್ಲಿ ತಿಳಿಸಿದೆ.
Til hamingju @isro með landkönnunarverðlaun Leifs Eriksonar 2023.
Chandrayaan færir þjóðinni enn meira lof. https://t.co/C7OL0i5jrx
— India in Iceland (@indembiceland) December 20, 2023
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್.ಸೋಮನಾಥ್ ಅವರು ಈ ಸಂದರ್ಭದಲ್ಲಿ “ಧನ್ಯವಾದ” ವೀಡಿಯೊ ಸಂದೇಶವನ್ನು ಕಳುಹಿಸಿದರು ಮತ್ತು ಬಾಹ್ಯಾಕಾಶ ಸಂಸ್ಥೆಯ ಪರವಾಗಿ ರಾಯಭಾರಿ ಬಿ ಶ್ಯಾಮ್ ಪ್ರಶಸ್ತಿಯನ್ನು ಸ್ವೀಕರಿಸಿದರು.
Congratulations @isro for the 2023 Leif Erikson Lunar Prize.
Chandrayaan brings more laurels to the nation. https://t.co/o2DrR7VpNU
— Dr. S. Jaishankar (@DrSJaishankar) December 20, 2023