ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯ ವಿವಾದವು ಇನ್ನೂ ಅಂತ್ಯಗೊಂಡಿಲ್ಲ, ಪ್ರಿಸೈಡಿಂಗ್ ಅಧಿಕಾರಿ ಅನಿಲ್ ಮಾಸಿಹ್ ಅವರು ಮತಪತ್ರಗಳನ್ನು ಅಮಾನ್ಯವೆಂದು ಘೋಷಿಸುವ ಮೊದಲು ಟಿಕ್ ಮಾಡುತ್ತಿರುವ ಹೊಸ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಪಂಜಾಬ್ ಘಟಕವು ಟ್ವೀಟ್ ಮಾಡಿದ 25 ಸೆಕೆಂಡುಗಳ ವೀಡಿಯೊದಲ್ಲಿ, ಮಾಸಿಹ್ ಸಿಸಿಟಿವಿ ಕ್ಯಾಮೆರಾವನ್ನು ನೋಡುತ್ತಿರುವುದನ್ನು ಮತ್ತು ಮತಪತ್ರಗಳನ್ನು ಟಿಕ್ ಮಾಡಿ ತೆರೆದ ಪೆಟ್ಟಿಗೆಯಲ್ಲಿ ಇಡುವುದನ್ನು ಕಾಣಬಹುದು. ಕಳೆದ ವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಗೆಲುವು ಸಾಧಿಸಿತ್ತು.
“ಇದಕ್ಕಿಂತ ದೊಡ್ಡ ಪುರಾವೆ ಇನ್ನೇನು ಬೇಕು? ಬಿಜೆಪಿಯ ಪ್ರಿಸೈಡಿಂಗ್ ಆಫೀಸರ್ ಸ್ವತಃ ಮತಗಳನ್ನು ರದ್ದುಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ ಎಂಬುದನ್ನು ನೋಡಿ. ಇದು ಬಿಜೆಪಿಯ ಸರ್ವಾಧಿಕಾರಕ್ಕೆ ಜೀವಂತ ಸಾಕ್ಷಿ’ ಎಂದು ಆಮ್ ಆದ್ಮಿ ಟೀಕಿಸಿದೆ. ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
https://twitter.com/AAPPunjab/status/1754548714507841943?ref_src=twsrc%5Etfw%7Ctwcamp%5Etweetembed%7Ctwterm%5E1754548714507841943%7Ctwgr%5Eb9fce28e486595157d07a863a22bb53bdee80096%7Ctwcon%5Es1_&ref_url=https%3A%2F%2Fwww.news9live.com%2Findia%2Fchandigarh-mayoral-elections-aap-shares-video-of-presiding-officer-ticking-ballot-papers-2429825