BIG NEWS: ಚಾಮುಂಡಿ ಬೆಟ್ಟದ ಶಿವಾರ್ಚಕ ವಿಧಿವಶ: ಇಂದು ತಾಯಿ ಚಾಮುಂಡಿ ದೇವಿ ದರ್ಶನಕ್ಕೆ ನಿರ್ಬಂಧ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ದಸರಾ ಸಂಭ್ರಮ-ಸಡಗರದ ನಡುವೆಯೇ ಅವಘಡವೊಂದು ಸಂಭವಿಸಿದೆ. ಚಾಮುಂಡಿ ಬೆಟ್ಟದ ಶಿವಾರ್ಚಕರು ವಿಧಿವಶರಾಗಿದ್ದಾರೆ.

ಶಿವಾರ್ಚಕ ವಿ.ರಾಜು ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡಿ ದೇವಿ ದರ್ಶನ ಕೆಲ ಕಾಲ ನಿರ್ಬಂಧಿಸಲಾಗಿದೆ. ನಿನ್ನೆ ತಡರಾತ್ರಿ ಚಾಮುಂಡಿ ಬೆಟ್ಟದ ಶಿವಾರ್ಚಕ ವಿ.ರಾಜು ನಿಧನರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ತಾಯಿ ಚಾಮುಂಡಿ ದೇವಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಧ್ಯಾಹ್ನದವರೆಗೂ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮಧ್ಯಾಹ್ನ ಸಂಸ್ಕಾರ ಮುಗಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read