ಚಾಮರಾಜನಗರ: ಪುರಾತನ ಶಿವ ದೇವಾಲಯದಲ್ಲಿ ಶಿವಲಿಂಗದ ಮುಂದೆಯೇ ಪುಂಡರು ಮದ್ಯಪಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ದೇವಸ್ಥಾನದಲ್ಲಿ ನಡೆದಿದೆ.
ಮೈಸೂರು ಮಹಾರಾಜರು ನಿರ್ಮಿಸಿರುವ ಈ ಶಿವ ದೇವಾಲಯ ಈಗ ಪಾಳುಬಿದ್ದಂತಾಗಿದ್ದು, ಅದನ್ನು ಪುಂಡರು ಮದ್ಯಪಾನ ಮಾಡುವ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ದೇವಾಲಯ, ದೇವರು ಎಂಬ ಕಿಂಚಿತ್ತೂ ಭಯ-ಭಕ್ತಿಯೂ ಇಲ್ಲದೇ ಹಾಡಹಗಲೇ ಶಿವಲಿಂಗದ ಬಳಿ ಮನಸೋ ಇಚ್ಚೆ ಮದ್ಯಪಾನ ಮಾಡಿ, ಹುಚ್ಚಾಟ ಮೆರೆದಿದ್ದಾರೆ.
ಮಾಧ್ಯಮದವರ ಕ್ಯಾಮರಾ ಕಾಣುತ್ತಿದ್ದಂತೆ ಮದ್ಯದ ಬಾಟಲಿಗಳನ್ನು ಶಿವಲಿಂಗದ ಬಳಿ ಬಿಟ್ಟು ಎದ್ದುಬಿದ್ದು ಪರಾರಿಯಾಗಿದ್ದಾರೆ. ಐತಿಹಾಸಿಕ, ಪುರಾತನ ಸ್ಥಳಗಳನ್ನು ಉಳಿಸಬೇಕಾದ ಯುವಜನತೆ, ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ, ಬುದುಕು ರೂಪಿಸಿಕೊಳ್ಳಬೇಕಾಗಿರುವ ಯುವಕರು ಇಂದು ಹಾಡಹಗಲೇ ಯಾರ ಭಯವೂ ಇಲ್ಲದೇ ಅದು ದೇವಾಲಯದಲ್ಲಿ ಮದ್ಯಪಾನಗಳನ್ನು ಮಾಡುತ್ತಾ ಸಮಾಜಕ್ಕೆ ಕಂಠಕಪ್ರಾಯರಾಗುತ್ತಿರುವುದು ನಿಜಕ್ಕೂ ದುರಂತವೇ ಸರಿ