ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸದ ಮೂವರು ಭದ್ರತಾ ಗಾರ್ಡ್ ಗಳನ್ನು ಗೃಹ ಇಲಾಖೆ ಹಿಂಪಡೆದಿದೆ. ಸರ್ಕಾರದ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಆದರೆ ಈಗ ಮೂವರು ಭದ್ರತಾ ಸಿಬ್ಬಂದಿಗಳನ್ನು ವಾಪಾಸ್ ಪಡೆದುಕೊಂಡಿದ್ದಾರೆ. ನನಗೆ ಭದ್ರತೆ ಬೇಕು. ಇದರ ಹಿಂದೆ ಪ್ರಿಯಾಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ ಪ್ರೊಯಾಂಕ್ ಖರ್ಗೆಯೂ ಅಷ್ಟೇ ಹೊಣೆ. ಪ್ರಿಯಾಂಕ್ ಖರ್ಗೆ ಕುಟುಂಬವೂ ಅಷ್ಟೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ವಿಪಕ್ಷನಾಯಕನಾಗಿ ಒಂದೂವರೆ ವರ್ಷ ಕಳೆದಿದೆ. ಆದಾರಊ ಈವರೆಗೆ ನನಗೆ ಸರ್ಕಾರಿ ಮನೆ ಕೊಟ್ಟಿಲ್ಲ. ಇದೇ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳವಾಡಿ ಮನೆ ತೆಗೆದುಕೊಂಡಿದ್ದರು. ಈಗ ನನಗೆ ಕೊಟ್ಟ ಭದ್ರತೆಯನ್ನೂ ಹಿಂಪಡೆದಿದ್ದಾರೆ. ನನಗೆ ಕೊಟ್ಟ ಭದ್ರತೆ ವಾಪಸ್ ಪಡೆದಿದ್ದು ಯಾಕೆ? ಇದಕ್ಕೆ ಗೃಹ ಸಚಿವರು ಉತ್ತರ ನೀಡಲಿ. ಇಲ್ಲವಾದಲ್ಲಿ ನನಗೆ ಕೊಟ್ಟಿರುವ ಕಾರು, ಬೆಂಗಾವಲು, ಭದ್ರತಾ ಸಿಬ್ಬಂದಿ ಎಲ್ಲವನ್ನೂ ವಪಸ್ ಕಳುಹಿಸುತ್ತೇನೆ ಎಂದು ಕಿಡಿಕಾರಿದ್ದಾರೆ.