ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭದ್ರತಾ ಗಾರ್ಡ್ ಗಳನ್ನು ಗೃಹ ಇಲಾಖೆ ಹಿಂಪಡೆದಿದೆ.
ಛಲವಾದಿ ನಾರಾಯಣಸ್ವಾಮಿ ತಮ್ಮ ನಿವಾಸಕ್ಕೆ ಮೂವರು ಭದ್ರತಾ ಗಾರ್ಡ್ ಗಳನ್ನು ಹೊಂದಿದ್ದರು. ಇದೀಗ ಗೃಹ ಇಲಾಖೆ ಮೂವರು ಭದ್ರತಾ ಗಾರ್ಡ್ ಗಳನ್ನು ಹಿಂಪಡೆದುಕೊಂಡಿದೆ.
ಇದೇ ವೇಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಿವಾಸದ ಗಾರ್ಡ್ ಹಾಗೂ ಬೆಂಗಾವಲು ಭದ್ರತೆಗಳನ್ನು ಹಿಂಪಡೆದು ಗೃಹ ಇಲಾಖೆ ಆದೇಶ ಹೊರಡಿಸಿದೆ.