ಕುಂದಾಪುರ : ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಹಿರಿಯಡ್ಕದ ವರ ಶ್ರೀಕಾಂತ್ ಕಶ್ಯಪ್ ಜೊತೆ ಚೈತ್ರಾ ಕುಂದಾಪುರ ಹಸೆಮಣೆ ಏರಿದ್ದಾರೆ.
ಚೈತ್ರಾ ಮತ್ತು ಶ್ರೀಕಾಂತ್ ಸುಮಾರು 12 ವರ್ಷಗಳಿಂದ ಪ್ರೀತಿಸುತ್ತುದ್ದರು, ನಂತರ ಹಿರಿಯರ ಸಮ್ಮತಿ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್, ಗೋಲ್ಡ್ ಸುರೇಶ್ ಮತ್ತಿತರರು ಬಂದಿದ್ದರು. ಆ್ಯನಿಮೇಷನ್ ಕೋರ್ಸ್ ಓದಿಕೊಂಡಿರುವ ಶ್ರೀಕಾಂತ್ ಜ್ಯೋತಿಷ್ಯ ಹಾಗೂ ಪೌರೋಹಿತ್ಯ ಕೆಲಸದಲ್ಲೂ ಪರಿಣಿತಿ ಹೊಂದಿದ್ದಾರೆ.
You Might Also Like
TAGGED:ಚೈತ್ರಾ ಕುಂದಾಪುರ