ಮಾನವೀಯತೆ ಮರೆತ ಹಮಾಸ್: UNSC ಯಲ್ಲಿ ಒತ್ತೆಯಾಳಿನ ಭಯಾನಕ ಸಾಕ್ಷ್ಯ | Watch Video

491 ದಿನಗಳ ಕಾಲ ಹಮಾಸ್‌ನಿಂದ ಒತ್ತೆಯಾಳಾಗಿ ಬಂಧಿಸಲ್ಪಟ್ಟಿದ್ದ ಇಸ್ರೇಲಿ ಒತ್ತೆಯಾಳು ಎಲಿ ಶರಾಬಿ, ತಮ್ಮ ಕರಾಳ ಅನುಭವವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ವಿವರಿಸಿದ್ದಾರೆ. “ನಾನು ನರಕದಿಂದ ಹಿಂದಿರುಗಿದ್ದೇನೆ. ನನ್ನನ್ನು ಭೂಗತದಲ್ಲಿ ಇರಿಸಲಾಗಿತ್ತು, ಹಸಿವಿನಿಂದ ಬಳಲಿಸಲಾಗಿತ್ತು, ಹೊಡೆಯಲಾಗಿತ್ತು ಮತ್ತು ಪ್ರಾಣಿಯಂತೆ ಸರಪಳಿಯಲ್ಲಿ ಬಂಧಿಸಲಾಗಿತ್ತು. 491 ದಿನಗಳ ಕಾಲ, ನಾನು ಆಹಾರಕ್ಕಾಗಿ ಭಿಕ್ಷೆ ಬೇಡಿದೆ, ಸ್ನಾನಗೃಹವನ್ನು ಬಳಸಲು ಭಿಕ್ಷೆ ಬೇಡಿದೆ, ಭಿಕ್ಷೆ ನನ್ನ ಅಸ್ತಿತ್ವವಾಯಿತು” ಎಂದು ಎಲಿ ಶರಾಬಿ ಹೇಳಿದ್ದಾರೆ.

ಫೆಬ್ರವರಿ 8 ರಂದು ಬಿಡುಗಡೆಯಾದಾಗ, ಅವರ ತೂಕ 44 ಕೆ.ಜಿ. ಆಗಿತ್ತು. ಅಕ್ಟೋಬರ್ 7, 2023 ರಂದು ಹಮಾಸ್‌ನ ಆಶ್ಚರ್ಯಕರ ದಾಳಿಯಲ್ಲಿ ಅವರ ಪತ್ನಿ ಮತ್ತು ಹಿರಿಯ ಮಗಳೊಂದಿಗೆ ಅವರ ಕಿರಿಯ ಮಗಳು ಕೊಲ್ಲಲ್ಪಟ್ಟಳು. ಆ ದಾಳಿಯಲ್ಲಿ ಸುಮಾರು 1,200 ಮಂದಿ ಸಾವನ್ನಪ್ಪಿದ್ದು, 251 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಮಾಡಲಾಯಿತು.

“ವಿಶ್ವಸಂಸ್ಥೆ ಎಲ್ಲಿದೆ ? ರೆಡ್‌ಕ್ರಾಸ್ ಎಲ್ಲಿದೆ ? ಜಗತ್ತು ಎಲ್ಲಿದೆ ?” ಎಂದು ಶರಾಬಿ ಪ್ರಶ್ನಿಸಿ ಗಾಜಾದಲ್ಲಿ ಇನ್ನೂ 59 ಒತ್ತೆಯಾಳುಗಳಿದ್ದು, ಅವರಲ್ಲಿ ಹಲವರು ಸತ್ತಿದ್ದಾರೆ ಎಂದು ನಂಬಲಾಗಿದೆ. “ನೀವು ಮಾನವೀಯತೆಗಾಗಿ ನಿಂತರೆ, ಅದನ್ನು ಸಾಬೀತುಪಡಿಸಿ” ಎಂದು ಶರಾಬಿ ಯುಎನ್‌ನ ಪ್ರಬಲ ಸಂಸ್ಥೆಗೆ ಸವಾಲು ಹಾಕಿದರು.

ಬ್ರಿಟನ್‌ನ ಉಪ ರಾಯಭಾರಿ ಜೇಮ್ಸ್ ಕರಿಯುಕಿ, ಶರಾಬಿಯವರ ಸಂಕಟ “ಊಹೆಗೆ ಮೀರಿದ್ದು” ಎಂದು ಕರೆದು “ಹಮಾಸ್ ತಮ್ಮ ಹೇಯ ಕೃತ್ಯಗಳಿಗೆ ಹೊಣೆಗಾರರಾಗಬೇಕು” ಎಂದು ಹೇಳಿದರು. ಫ್ರಾನ್ಸ್‌ನ ಹೊಸ ಯುಎನ್ ರಾಯಭಾರಿ ಜೆರೋಮ್ ಬೊನ್ನಾಫಾಂಟ್ ಶರಾಬಿಗೆ ತಮ್ಮ ದೇಶದ ಸಾಂತ್ವನವನ್ನು ವ್ಯಕ್ತಪಡಿಸಿದರು, ಆದರೆ ಇಸ್ರೇಲ್‌ನ ಬಾಂಬ್ ದಾಳಿಯನ್ನು ಖಂಡಿಸಿದರು.

ರಷ್ಯಾದ ಉಪ ಯುಎನ್ ರಾಯಭಾರಿ ಡಿಮಿಟ್ರಿ ಪೊಲಿಯಾನ್ಸ್ಕಿ, “ಎಲಿ ಶರಾಬಿಯವರ ದುರಂತ ಕಥೆಯನ್ನು ಕೇಳಿದಾಗ ನಮ್ಮ ಹೃದಯಗಳು ದುಃಖದಿಂದ ತುಂಬಿದವು” ಎಂದು ಹೇಳಿದರು.

ಸ್ಥಳೀಯ ಆರೋಗ್ಯ ಅಧಿಕಾರಿಗಳು ಇಸ್ರೇಲ್‌ನ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಕನಿಷ್ಠ 85 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಕದನ ವಿರಾಮವನ್ನು ಇಸ್ರೇಲ್ ಮುರಿದ ನಂತರ ಸುಮಾರು 600 ಮಂದಿ ಸಾವನ್ನಪ್ಪಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read