ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿಂಗ್ ಪ್ರವೇಶಕ್ಕೆ ಜೂ. 22 ರಂದು ಆಫ್ ಲೈನ್ ನಲ್ಲಿ ಸಿಇಟಿ: ಪರೀಕ್ಷಾ ಕೇಂದ್ರ ಆಯ್ಕೆಗೆ ಸೂಚನೆ

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಮೂರನೇ ಸೆಮಿಸ್ಟರ್ ಪ್ರವೇಶಕ್ಕಾಗಿ ಜೂನ್ 22 ರಂದು ಸಿಇಟಿ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಮೊದಲು ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ನಿರ್ಧರಿಸಲಾಗಿತ್ತು. ವಿವಿಧ ಕಾರಣಗಳಿಂದ ಪರೀಕ್ಷೆಯನ್ನು ಆಫ್ಲೈನ್ ಸ್ವರೂಪದಲ್ಲಿ ಹಿಂದಿನ ವರ್ಷಗಳಲ್ಲಿ ನಡೆಸಿದಂತೆಯೇ ಒಎಂಆರ್ ಉತ್ತರ ಪತ್ರಿಕೆಯ ಮಾದರಿಯಲ್ಲಿ ನಡೆಸಲಾಗುವುದು.

ಬಾಗಲಕೋಟೆ, ಬಳ್ಳಾರಿ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಉಡುಪಿ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡವರು ಪ್ರಾಧಿಕಾರದ ವೆಬ್ಸೈಟ್ ಮೂಲಕ ಮೇ 24ರ ಬೆಳಗ್ಗೆ 11 ರಿಂದ ಮೇ 27ರ ರಾತ್ರಿ 11:59ರ ಒಳಗೆ ಬದಲಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read