ಏ. 16, 17 ರಂದು ಸಿಇಟಿ ಪರೀಕ್ಷೆ: ಸೀಟ್ ಬ್ಲಾಕಿಂಗ್ ದಂಧೆ ಸೇರಿ ಅಕ್ರಮ ತಡೆಗೆ ಮಹತ್ವದ ಕ್ರಮ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಏಪ್ರಿಲ್ 16, 17ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಸೀಟ್ ಬ್ಲಾಕಿಂಗ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಒಂದು ಅರ್ಜಿಗೆ ಒಂದು ಮೊಬೈಲ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಅದೇ ಸಂಖ್ಯೆಗೆ ಬರುವ ಒಟಿಪಿ ದೃಢೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಸಾಧ್ಯವಾಗಲಿದೆ. ಪರೀಕ್ಷೆಯ ದಿನಾಂಕ, ಸೂಚನೆ, ಸೀಟು ಹಂಚಿಕೆ, ಪ್ರವೇಶ ಸೇರಿ ಎಲ್ಲಾ ಮಾಹಿತಿಗಳನ್ನು ಅದೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.

ಆನ್ಲೈನ್ ಮೂಲಕ ಜನವರಿ 23 ರಿಂದ ಫೆಬ್ರವರಿ 21ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಕ್ರಮ ತಡೆಗೆ ಅರ್ಜಿ ಭರ್ತಿ ದಾಖಲೆ ಪರಿಶೀಲನೆ ಪ್ರಕ್ರಿಯೆಯಲ್ಲಿ ಅನೇಕ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಹಂತದಲ್ಲೂ ಪ್ರಮಾಣಿಕರಿಸಲಾಗುವುದು. ಏಪ್ರಿಲ್ 16ರಂದು ಬೆಳಗ್ಗೆ 10.30 ರಿಂದ ಭೌತವಿಜ್ಞಾನ, ಮಧ್ಯಾಹ್ನ 2:30 ರಿಂದ ರಾಸಾಯನ ವಿಜ್ಞಾನ, ಏ. 17ರಂದು ಬೆಳಗ್ಗೆ ಗಣಿತ, ಮಧ್ಯಾಹ್ನ ಜೀವ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿವೆ. ಏಪ್ರಿಲ್ 18ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read