ಮುಂಬೈ: ಪತಿಯ ಕಿರುಕುಳ, ಕೌಟುಂಬಿಕ ಹಿಂಸೆ, ದೌರ್ಜನ್ಯಕ್ಕೆ ಬೇಸತ್ತು ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ಸೆಲಿನಾ ಜೇಟ್ಲಿ ತಮ್ಮ ಪತಿ ವಿರುದ್ಧ ಕಿರುಕುಳ, ದೌರ್ಜನ್ಯ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ.
ನಟಿ ಸೆಲಿನಾ ಜೇಟ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಶ್ರೀಮತಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸೇಲಿನಾ ಜೇಟ್ಲಿ ಪತಿ ಆಸ್ಟ್ರಿಯನ್ ಪ್ರಜೆ ಪೀಟರ್ ಹಾಗ್. ಪತಿ ವಿರುದ್ಧ ಸೆಲಿನಾ ಕೌಟುಂಬಿಕ ಹಿಂಸಾಚಾರ ಆರೋದಡಿ ಕೇಸ್ ದಾಖಲಿಸಿದ್ದಾರೆ. ಮುಂಬೈ ನ ಅಂಧೇರಿ ನ್ಯಾಯಾಲಯ ಪೀಟರ್ ಹಾಗ್ ಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 12ರಂದು ಮುಂದೂಡಲಾಗಿದೆ. ಸೆಲಿನಾ ಜೇಟ್ಲಿ, ಪತಿ ಪೀಟರ್ ಹಾಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ, ದೈಹಿಕ ಹಿಂಸೆ, ಮಾನಸಿಕ ಕಿರುಕುಳ, ಆರ್ಥಿಕ ಕಿರುಕುಳ ಆರೋಪ ಮಾಡಿದ್ದಾರೆ. 50 ಕೋಟಿ ಪರಿಹಾರ ಮತ್ತು ಮಾಸಿಕ ನಿರ್ವಹಣೆಗಾಗಿ 10 ಲಕ್ಷ ರೂಪಾಯಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಪತಿ ತನ್ನನ್ನು ಸೇವಕಿ ಎಂದು ಕರೆದು ನಿಂದಿಸುತ್ತಿದ್ದು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುತ್ತಿರುವುದಾಗಿ ಸೆಲಿನಾ ಆರೋಪಿಸಿದ್ದಾರೆ.
