
ಶಾಲಾ ಶಿಕ್ಷಣ ಆರಂಭಿಸುವ ಮಕ್ಕಳಿಗೆ ಭದ್ರವಾದ ಶೈಕ್ಷಣಿಕ ಬುನಾದಿ ಹಾಕುವ ನಿಟ್ಟಿನಲ್ಲಿ ನರ್ಸರಿಯಿಂದ ಎರಡನೇ ತರಗತಿವರೆಗೂ (3-8 ವರ್ಷದವರೆಗೂ) ರಾಷ್ಟ್ರೀಯ ತಳಮಟ್ಟದ ಪಠ್ಯಕ್ರಮದ ಚೌಕಟ್ಟು 2022ಕ್ಕೆ (ಎನ್‌ಸಿಎಫ್‌ಎಫ್‌ಎಸ್) ಮುಂದಿನ ಶೈಕ್ಷಣಿಕ ವರ್ಷದಿಂದ ಚಾಲನೆ ನೀಡಲು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ.
ಐದು ವರ್ಷಗಳ ಈ ಶೈಕ್ಷಣಿಕ ಕಾರ್ಯಕ್ರಮವನ್ನು 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಎನ್‌ಸಿಇಆರ್‌ಟಿ ಅಭಿವೃದ್ಧಿಪಡಿಸಿದೆ. ಮಕ್ಕಳಲ್ಲಿ
ವಯಸ್ಸಿಗನುಗುಣವಾಗಿ ಕಲಿಕಾ ಗುರಿಗಳನ್ನು ನಿಗದಿ ಪಡಿಸಿ, ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಶಿಕ್ಷಣ ಹಾಗೂ ಕಲಿಕಾ ವಿಧಗಳ ಪ್ರಾರಂಭಿಕ ಹಂತ ಇದಾಗಿದೆ ಎಂದು ಸಿಬಿಎಸ್‌ಇಯ ಸುತ್ತೋಲೆ ತಿಳಿಸಿದೆ.
ತಳಹಾದಿಯ ಅಥವಾ ಪ್ರಾಥಮಿಕ ಶಿಕ್ಷಣ ಒದಗಿಸುವ ಶಾಲೆಗಳು ಎನ್‌ಸಿಎಫ್‌ಎಫ್‌ಎಸ್-2022ರ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

 
			 
		 
		 
		 
		 Loading ...
 Loading ... 
		 
		 
		