ಗ್ರಾಮಸ್ಥರೊಂದಿಗೆ ಬೀಡಿ ಸೇದಿದ ಸಚಿವ: ಬಾಯಿಯಿಂದ ಹೊಗೆ ಎಳೆದು ಮೂಗಿನ ಮೂಲಕ ಬಿಟ್ಟು ಹಳ್ಳಿಗನಿಗೆ ಮಾರ್ಗದರ್ಶನ

ನವದೆಹಲಿ: ಛತ್ತೀಸ್‌ಗಢದ ಸಚಿವ ಕವಾಸಿ ಲಖ್ಮಾ ಅವರ ವಿಡಿಯೋವೊಂದು ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಚಿಕ್ಕ ಕ್ಲಿಪ್‌ನಲ್ಲಿ, ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ಬೀಡಿ ಸೇದುವುದನ್ನು ಕಾಣಬಹುದು.

ಲಖ್ಮಾ ಒಬ್ಬ ಹಳ್ಳಿಗನಿಗೆ ತನ್ನ ಬಾಯಿಯ ಮೂಲಕ ಹೊಗೆಯನ್ನು ಒಳಗೆಳೆದುಕೊಳ್ಳಲು ಮತ್ತು ಅದನ್ನು ಮೂಗಿನ ಮೂಲಕ ಬಿಡುವಂತೆ ಮಾರ್ಗದರ್ಶನ ಮಾಡುತ್ತಾರೆ. ನಂತರ ಅವರು ಸ್ವತಃ ಅದೇ ರೀತಿ ಮಾಡಿ ತೋರಿಸುತ್ತಾರೆ. ಈ ರೀತಿ ಮಾಡುವಾಗ ಅವರು ನಗುತ್ತಲೇ ಇದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದಕ್ಕೆ ನೆಟಿಜನ್‌ಗಳಿಂದ ಎಲ್ಲ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ರಾಜ್ಯ ವಿರೋಧ ಪಕ್ಷವಾದ ಬಿಜೆಪಿ ಸಚಿವರ ನಡೆಯನ್ನು ಟೀಕಿಸಿದೆ. ಮಹಾತ್ಮ ಗಾಂಧಿಯವರ ತತ್ವಗಳಿಗೆ ವಿರುದ್ಧವಾಗಿ ಲಖ್ಮಾ ಮಾದಕ ದ್ರವ್ಯ ಸೇವನೆಯ ಸಂಸ್ಕೃತಿ ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read