ಮಹಿಳೆಗೆ ಕಿರುಕುಳ ನೀಡಿದ್ದ ಬಿಎಸ್​ಎಫ್​ ಪಡೆ ಸಿಬ್ಬಂದಿ ಸಸ್ಪೆಂಡ್

ಕಳೆದ ವಾರ ಮಣಿಪುರದ ಕಿರಾಣಿ ಅಂಗಡಿಯಲ್ಲಿ ಸ್ಥಳೀಯ ಮಹಿಳೆಗೆ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿದ್ದ ಬಿಎಸ್​ಎಫ್​ ಯೋಧನನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಡ್​ ಕಾನ್​​ಸ್ಬೇಬಲ್​ ಆಗಿರುವ ಸತೀಶ್​ ಪ್ರಸಾದ್​, ಮಹಿಳೆಯನ್ನು ನಿಂದಿಸಿದ್ದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿತ್ತು. ವಿಡಿಯೋದಲ್ಲಿ ಸೂಪರ್​ ಮಾರ್ಕೆಟ್​​ ಮಾದರಿಯ ಕಿರಾಣಿ ಅಂಗಡಿಯಲ್ಲಿದ್ದ ಮಹಿಳೆಯ ಎದೆ ಭಾಗವನ್ನು ಬಿಎಸ್​ಎಫ್​ ಜವಾನ ಸ್ಪರ್ಶಿಸಿ ಕಿರುಕುಳ ನೀಡುತ್ತಿರೋದನ್ನು ಕಾಣಬಹುದಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕವಾಗಿ ಆಕ್ರೋಶ ಹೊರ ಹಾಕಿದ್ದರು.

ಜುಲೈ 20ರಂದು ಇಂಫಾಲ್​​​ ಪಶ್ಚಿಮ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಅರೆಸೈನಿಕ ಪಡೆಗೆ ದೂರು ಕೇಳಿ ಬಂದ ಬಳಿಕ ಈ ಪ್ರಕರಣವನ್ನು ಪರಿಶೀಲಿಸಿದ ಗಡಿ ಭದ್ರತಾ ಪಡೆ ಸತೀಶ್​ ಪ್ರಸಾದ್​ರನ್ನು ಸೇವೆಯಿಂದ ಅಮಾನತುಗೊಳಿಸಿದೆ ಎಂದು ಬಿಎಸ್​ಎಫ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ನಡೆದ ಜನಾಂಗೀಯ ನಿಂದೆ ಪ್ರಕರಣದಲ್ಲಿ ಭದ್ರತಾ ಕರ್ತವ್ಯಕ್ಕೆಂದು ತಾತ್ಕಾಲಿಕ ಘಟಕಕ್ಕೆ ನಿಯೋಜನೆ ಮಾಡಲಾಗಿದ್ದ 100 ಬೆಟಾಲಿಯನ್​​ಗೆ ಸೇರಿದ್ದ ಹೆಡ್​​​ ಕಾನ್​ಸ್ಟೇಬಲ್​​ ಸತೀಶ್​ ಪ್ರಸಾದ್​ ವಿರುದ್ಧ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಬಿಎಸ್​ಎಫ್​ ತಿಳಿಸಿದೆ.

https://twitter.com/i/status/1683527491544129541

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read