Caught on Cam | ಕಾರು ರಿಪೇರಿ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಮೆಕ್ಯಾನಿಕ್; ಶಾಕಿಂಗ್ ದೃಶ್ಯ ಕ್ಯಾಮರಾದಲ್ಲಿ ಸೆರೆ

ಹೈದರಾಬಾದ್: ಕಾರು ರಿಪೇರಿ ಮಾಡುತ್ತಿದ್ದಾಗಲೇ ಮೆಕ್ಯಾನಿಕ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಆಟೋನಗರದಲ್ಲಿರುವ ಹ್ಯುಂಡೈ ಶೋರೂಮ್‌ನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿ‌ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮರಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟ್ವಿಟರ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮೆಕ್ಯಾನಿಕ್ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ಕಾಣಬಹುದು. ಅಕ್ಕಪಕ್ಕದಲ್ಲಿದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಹೃದಯಾಘಾತದಿಂದ ಮೃತಪಟ್ಟ ಮೆಕ್ಯಾನಿಕ್ ಅನ್ನು ಜಂಗಾರೆಡ್ಡಿ ಎಂದು ಗುರುತಿಸಲಾಗಿದೆ. ಈ ಘಟನೆಯು ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಹೃದಯಾಘಾತಗಳ ಆತಂಕಕಾರಿ ಏರಿಕೆಯನ್ನು ಎತ್ತಿ ತೋರಿಸುತ್ತದೆ. ಇಂತಹ ದುರಂತ ಫಲಿತಾಂಶಗಳನ್ನು ತಡೆಗಟ್ಟಲು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಪ್ರಾಮುಖ್ಯತೆಯನ್ನು ವೈದ್ಯಕೀಯ ತಜ್ಞರು ಒತ್ತಿಹೇಳಿದ್ದಾರೆ.

ಈ ಘಟನೆಯು ಉದ್ಯೋಗಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಮತ್ತು ಕೆಲಸದ ಸ್ಥಳದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಉದ್ಯಮಗಳಿಗೆ ಎಚ್ಚರಿಕೆಯ ಕರೆಯಾಗಿದೆ.

https://twitter.com/TeluguScribe/status/1690640348589240320?ref_src=twsrc%5Etfw%7Ctwcamp%5Etweetembed%7Ctwterm%5E1690640348589240320%7Ctwgr%5Ee4d5ddc667546e5040a1e1a599981fe410148077%7Ctwcon%5Es1_&ref_url=https%3A%2F%2Fwww.freepressjournal.in%2Findia%2Fcaught-on-cam-hyderabad-mechanic-suffers-heart-attack-while-reparing-car-at-service-centre-dies-on-spot

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read