Caught on Cam: ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಹುಡುಗಿ

ಬೀದಿ ಕಾಮಣ್ಣನೊಬ್ಬನಿಗೆ ಪಾಠ ಕಲಿಸಲು ನಿರ್ಧರಿಸಿದ ಯುವತಿಯೊಬ್ಬಳು ಆತನನ್ನ ಡೇಟಿಂಗ್‌ಗೆ ಕರೆದಂತೆ ಮಾಡಿ ಚಪ್ಪಲಿಯಲ್ಲಿ ಬಾರಿಸಿ ಕಳುಹಿಸಿರುವ ಘಟನೆ ಗ್ವಾಲಿಯರ್‌ನಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಪಾದಿತನು ಸಂತ್ರಸ್ತೆ ಹಾಗೂ ಆಕೆಯ ಸಹೋದರಿಯನ್ನು ಪದೇ ಪದೇ ಚುಡಾಯಿಸುವುದಲ್ಲದೇ ಅವರನ್ನು ಕರೆಯುತ್ತಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆತನನ್ನು ದೂರವಿಡಲು ಯುವತಿ ಅದೆಷ್ಟೇ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ, ಆತನಿಗೆ ಪಾಠ ಕಲಿಸಲು ಉದ್ದೇಶಿಸಿದ ಯುವತಿ ಆಪಾದಿತನನ್ನು ಗ್ವಾಲಿಯರ್‌ನ ಆಕಾಶವಾಣಿ ಎದುರಿನ ಝಲ್ಕಾರಿ ಬಾಯ್ ಉದ್ಯಾನಕ್ಕೆ ಕರೆದು, ಆತನಿಗೆ ಅಲ್ಲಿ ಚಪ್ಪಲಿ ಸೇವೆ ಮಾಡಿದ್ದಾಳೆ.

ನೋಡ ನೋಡುತ್ತಲೇ ಜನರು ಅಲ್ಲಿ ನೆರೆದಿದ್ದು, ಯುವತಿ ತನ್ನ ಕಥೆಯನ್ನು ಹೇಳುತ್ತಲೇ ಆಪಾದಿತನಿಗೆ ಧರ್ಮದೇಟು ಕೊಟ್ಟ ಜನ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

https://twitter.com/FreePressMP/status/1650801498148986883?ref_src=twsrc%5Etfw

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read