ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಕ್ಕಿನ ಅಪರಾಧ: ತಮಾಷೆಯ ವಿಡಿಯೋ ವೈರಲ್

ಅಂಗಡಿ ಅಥವಾ ಯಾವುದೇ ಸ್ಥಳವಾಗಿರಬಹುದು ಇಟ್ಟಿದ್ದ ವಸ್ತುಗಳು ಕಾಣೆಯಾದ್ರೆ ಅಥವಾ ಹಾಳಾದ್ರೆ ಅರೆ ಇದೇನಾಯ್ತು ಅಂತಾ ಗೊಂದಲಗೊಳ್ಳೋದು ಸಾಮಾನ್ಯ. ಸ್ಥಳದಲ್ಲಿ ಸಿಸಿ ಟಿವಿ ಏನಾದ್ರೂ ಇದ್ರೆ. ಏನಾಯ್ತು ಅನ್ನೋದು ತಿಳಿಯುತ್ತೆ. ಇದೀಗ ಬೆಕ್ಕಿನ ಅಪರಾಧವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪಾಪ.. ಬೆಕ್ಕು ತಪ್ಪಿತಸ್ಥನಲ್ಲ ಎಂದು ಹೇಳಿದ್ದಾರೆ.

ಹೌದು, ಬೆಕ್ಕೊಂದು ಡಿಪಾರ್ಟ್‌ಮೆಂಟಲ್ ಸ್ಟೋರ್‌ನ ಕೌಂಟರ್‌ನಲ್ಲಿ ಮೊಟ್ಟೆ ತುಂಬಿದ ಟ್ರೇಗೆ ಒರಗಿಕೊಂಡು ವಿಶ್ರಾಂತಿ ಪಡೆಯುತ್ತಿತ್ತು. ಇದ್ದಕ್ಕಿದ್ದಂತೆ ಬೆಕ್ಕು ತಿರುಗಲು ಪ್ರಯತ್ನಿಸುತ್ತದೆ. ಈ ವೇಳೆ ಮೊಟ್ಟೆ ತುಂಬಿದ್ದ ಟ್ರೇ ಜೊತೆಗೆ ಬೆಕ್ಕು ಕೆಳಗೆ ಬಿದ್ದಿದೆ. ಪರಿಣಾಮ ಮೊಟ್ಟೆ ಚೂರು ಚೂರಾಗಿವೆ.

ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ. ಬೆಕ್ಕು ತುಂಬಾ ನಿರುಪದ್ರವಿ ಮತ್ತು ಮುದ್ದಾಗಿದೆ. ಅದನ್ನು ಶಿಕ್ಷಿಸುವ ಬಗ್ಗೆ ಯೋಚಿಸುತ್ತಿದ್ದರೆ, ಆ ರೀತಿ ಮಾಡದಿರಿ ಎಂದೆಲ್ಲಾ ನೆಟ್ಟಿಗರು ಮನವಿ ಮಾಡಿದ್ದಾರೆ.

https://twitter.com/security_footag/status/1644301125787734016?ref_src=twsrc%5Etfw%7Ctwcamp%5Etweetembed%7Ctwterm%5E1644301125787734016%7Ctwgr%5E781a896f5739819f61d1911c0e6e1ce7865fbed2%7Ctwcon%5Es1_&ref_url=https%3A%2F%2Fwww.india.com%2Fviral%2Fbilli-cats-crime-caught-cctv-internet-says-not-guilty-watch-funny-viral-video-5986855%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read