alex Certify International | Kannada Dunia | Kannada News | Karnataka News | India News - Part 375
ಕನ್ನಡ ದುನಿಯಾ
    Dailyhunt JioNews

Kannada Duniya

ಜೋ ಬಿಡೆನ್​ ಗೆ ಡೊನಾಲ್ಡ್​ ಟ್ರಂಪ್​ ವಾರ್ನಿಂಗ್​..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಟ್ರಂಪ್​ಗೆ ಸೋಲಿನ ಭೀತಿ ಶುರುವಾಗಿದೆ. ಜೋ ಬಿಡೆನ್​ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆ ಡೊನಾಲ್ಡ್ ಟ್ರಂಪ್​ ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. Read more…

ಕೊರೊನಾ ಸಂಕಷ್ಟದ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೇಳಿದ ವಿಶ್ವ ಆರೋಗ್ಯ ಸಂಸ್ಥೆ

73ನೇ ವಿಶ್ವ ಆರೋಗ್ಯ ಅಸೆಂಬ್ಲಿ ಅಧಿವೇಶನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಮೂರು ನಿರ್ಣಾಯಕ ಸಂದೇಶವನ್ನ ಸಾರಿದೆ. ವಿಜ್ಞಾನ, ಪರಿಹಾರ ಹಾಗೂ ಒಗ್ಗಟ್ಟಿನಿಂದ ಕೊರೊನಾ ವೈರಸ್​ನ್ನು ಸೋಲಿಸಬಹುದು ಎಂದು Read more…

ಬಿಗ್ ನ್ಯೂಸ್: ಮೆದುಳು, ನರಮಂಡಲ ಸಂಬಂಧಿತ ಕಾಯಿಲೆಗೆ ತುತ್ತಾದ ರಷ್ಯಾ ಅಧ್ಯಕ್ಷ ಪುಟಿನ್ ಪದತ್ಯಾಗ ಸಾಧ್ಯತೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದಾರೆ. ಹೀಗಾಗಿ, ಅವರು ಜನವರಿಯಲ್ಲಿ ರಷ್ಯಾ ಅಧ್ಯಕ್ಷರ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ Read more…

ಬಾಹ್ಯಾಕಾಶಕ್ಕೆ ತೆರಳಬಲ್ಲ ನಟಿ ಹುಡುಕಾಟದಲ್ಲಿದೆ​ ಚಿತ್ರತಂಡ

ರಷ್ಯಾದ ಚಿತ್ರತಂಡವೊಂದು ಶೂಟಿಂಗ್​ಗಾಗಿ ಬಾಹ್ಯಾಕಾಶಕ್ಕೆ ತೆರಳುತ್ತಿರೋದಾಗಿ ಹೇಳಿದೆ. ಇದೀಗ ಈ ಸಿನಿಮಾಗೆ ಅಂತರಿಕ್ಷಕ್ಕೆ ತೆರಳಲು ಸಿದ್ಧವಿರುವ ನಾಯಕಿಗಾಗಿ ಹುಡುಕಾಟ ನಡೆದಿದೆ. ಇನ್ನು ಬಾಹ್ಯಾಕಾಶ ಶೂಟಿಂಗ್​​ಗೆ ಆಯ್ಕೆಯಾಗಬೇಕು ಅಂದರೆ ಚಿತ್ರತಂಡ Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ಶಾಕ್: ಬ್ರೂಸಲೋಸಿಸ್ ಸೋಂಕಿಗೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದಾರೆ. ಒಂದು ವರ್ಷದ ಹಿಂದೆಯೇ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದ್ದು, ರೋಗ ಉಲ್ಬಣವಾಗಿರುವುದು ಈಗ ಬಹಿರಂಗವಾಗಿದೆ. ಚೀನಾದ Read more…

ನಗು ತರಿಸುತ್ತೆ‌ ಕರ್ಫ್ಯೂ ವೇಳೆ ಮನೆಯಿಂದ ಹೊರಬರಲು ಈತ ಮಾಡಿದ ಪ್ಲಾನ್

ಯುರೋಪ್​ ರಾಜ್ಯಗಳಲ್ಲಿ ಕೊರೊನಾ ಎರಡನೆ ಅಲೆ ಶುರುವಾಗಿರೋದ್ರಿಂದ ಜನರಿಗೆ ಮನೆಯಿಂದ ಹೊರಬರೋದು ಕಷ್ಟವಾಗ್ತಿದೆ. ಹೇಗಾದ್ರೂ ಮಾಡಿ ಮನೆಯಿಂದ ಹೊರಬರಬೇಕು ಅಂತಾ ಜನರು ಚಿತ್ರವಿಚಿತ್ರ ಪ್ಲಾನ್​ ಮಾಡ್ತಿದ್ದಾರೆ. ಜೆಕ್​ ಗಣರಾಜ್ಯದಲ್ಲಿ Read more…

ಶಾಕಿಂಗ್: ಟಿವಿ ನೋಡುವುದರಲ್ಲಿ ಮಗ್ನನಾಗಿದ್ದ ಬಾಲಕ ಮಾಡಿದ್ದೇನು ನೋಡಿ…!

ಚೀನಾದ ಬಾಲಕನೊಬ್ಬ ತನ್ನ ಪೋಷಕರು ಮನೆಯಿಂದ ಹೊರಗಿದ್ದ ವೇಳೆ ಟಿವಿ ನೋಡುತ್ತಾ ಬರೋಬ್ಬರಿ 123 ಮಾಗ್ನೆಟಿಕ್​ ಮಣಿಗಳನ್ನ ನುಂಗಿದ್ದಾನೆ. ಬಾಲಕನ ದೇಹದ ಒಳಗಿದ್ದ ಮಣಿಗಳನ್ನ ಕಂಡ ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ. Read more…

ಮೆಟ್ರೋ ರೈಲಿನ ಒಳಗೆ ಬಾಲಕನ ಪ್ರತಿಭೆ ಪ್ರದರ್ಶನ

ಹೊಸದಾಗಿ ಲಾಂಚ್​ ಆಗಿದ್ದ ಮೆಟ್ರೋ ಒಳಗೆ ಬಾಲಕನೊಬ್ಬ ಆಕ್ರೋಬ್ಯಾಟಿಕ್​ ಪ್ರದರ್ಶನ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದ ಹಾಟ್​ ಫೇವರಿಟ್​ ಆಗಿದ್ದಾನೆ. ಪಾಕಿಸ್ತಾನದ ಲಾಹೋರ್​ನಲ್ಲಿ ನಡೆದ ಘಟನೆ ಇದಾಗಿದೆ. ಪಾಕಿಸ್ತಾನದ Read more…

ಹೀಗೊಂದು ಮ್ಯಾರೇಜ್ ಸ್ಟೋರಿ: ಅದ್ಧೂರಿಯಾಗಿ ತನ್ನನ್ನು ತಾನೇ ವಿವಾಹವಾಗಿ ಸಂಭ್ರಮಿಸಿದ ವೈದ್ಯ

ಬ್ರೆಸಿಲಿಯಾ: ವಿವಾಹಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇದ್ದವು…. ಮದುವೆಗೆ ಭರ್ಜರಿ ಸಿದ್ಧತೆಗಳು ನಡೆದಿದ್ದವು… ಆದರೆ ಮದುವೆಯಾಗಬೇಕಿದ್ದ ಹುಡುಗಿಯೊಂದಿಗಿನ ಮನಸ್ತಾಪದಿಂದಾಗಿ ಕೊನೆ ಘಳಿಗೆಯಲ್ಲಿ ಹುಡುಗಿ ಕೈಕೊಟ್ಟುಬಿಟ್ಟಿದ್ದಾಳೆ. ಆದರೂ ಮದುವೆ Read more…

ರೆಕ್ಕೆ ಇಲ್ಲದಿದ್ದರೂ ಈಜಲು ಕಲಿತ ಆಮೆ….!

2020ರ ವರ್ಷ ತುಂಬಾ ಕಷ್ಟವಾಗ್ತಿದೆ ಎಂದು ನಿಮಗೆ ಎನಿಸ್ತಾ ಇದ್ದರೆ ನೀವು ಈ ಸಮುದ್ರ ಆಮೆಯ ಪ್ರಯತ್ನವೊಮ್ಮೆ ನೋಡಲೇಬೇಕು. ತನ್ನ ಎರಡು ರೆಕ್ಕೆ ರೀತಿಯ ಅಂಗವನ್ನ ಕಳೆದುಕೊಂಡ ಬಳಿಕವೂ Read more…

ಮಿಲಿಯನ್ ಡಾಲರ್ ಗೆದ್ದ ಭಾರತೀಯ ಸಂಜಾತ

ಬರ್ಹೆನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ಭಾರಿ ದೊಡ್ಡ ಮೊತ್ತದ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ. ಬರ್ಹೆನ್ ನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿರುವ 33 ವರ್ಷದ ಸುನೀಲ Read more…

ವೃದ್ಧೆಯ ರ್ಯಾಪ್​ ಸಾಂಗ್​ಗೆ ಅಮೆರಿಕನ್ನರು ಫಿದಾ

ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲ್ಲ ಎಂಬ ಮಾತು 69 ವರ್ಷದ ಈ ಮಹಿಳೆಗೆ ಹೇಳಿ ಮಾಡಿಸಿದಂತಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಅಲ್ಫೋನ್ಸೋ ಹೆಸರಿನ ಈ ವೃದ್ಧೆ ನಿತ್ಯ Read more…

ಮುರಿದ ಗೊಂಬೆಗಳನ್ನು ಸರಿ ಮಾಡಲೂ ಇದೆ ಕ್ಲಿನಿಕ್…!

ಹುಡುಗಿಯರು ಎಷ್ಟೇ ದೊಡ್ಡವರಾದರೂ ಸಹ ಅವರಿಗೆ ಟೆಡ್ಡಿ ಬಿಯರ್​ಗಳ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಹಾಳಾದ ಗೊಂಬೆಗಳನ್ನ ಬಿಸಾಡೋಕೂ ಮನಸ್ಸಾಗದೇ ಅದನ್ನ ಇಟ್ಟುಕೊಳ್ಳೋಕೂ ಆಗದೇ ಕಷ್ಟ ಅನುಭವಿಸ್ತಾ ಇರೋರು ಹುಡುಕಿದ್ರೆ Read more…

“ನೀನು ಅಮೆರಿಕಾ ಪ್ರೆಸಿಡೆಂಟ್ ಆಗಬಹುದು” ಎಂದು ಕಮಲಾ ಹ್ಯಾರಿಸ್ ಹೇಳಿದ್ಯಾರಿಗೆ…?

ವಾಷಿಂಗ್ಟನ್: ಅಮೆರಿಕಾ ಉಪಾಧ್ಯಕ್ಷ ಸ್ಥಾನಾಂಕಾಂಕ್ಷಿ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್ ಈಗ ಎಲ್ಲೆಡೆ ಚರ್ಚೆಯಲ್ಲಿದ್ದಾರೆ. ಅವರು ತಮ್ಮ ಮೊಮ್ಮಗಳ ಜತೆ ಮಾಡಿದ ಸಂಭಾಷಣೆ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. Read more…

ಮೇಯರ್​​ ಆಗಿ ಆಯ್ಕೆಯಾದ ಶ್ವಾನ..!

ಅಮೆರಿಕದ ಕೆಂಟುಕಿ ರಾಜ್ಯದ ರ್ಯಾಬಿಟ್​ ಹ್ಯಾಶ್​ ಎಂಬ ಕುಗ್ರಾಮವು ಈ ವರ್ಷದ ಹೊಸ ಮೇಯರ್​ನ್ನು ಆಯ್ಕೆ ಮಾಡಿದೆ. ಆದರೆ ಈ ಮೇಯರ್​ ಆಗಿ ಮನುಷ್ಯನನ್ನ ಆಯ್ಕೆ ಮಾಡುವ ಬದಲು Read more…

ಗೇಟ್‌ ಹಾರಲಾಗದೆ ಸಿಕ್ಕಿಬಿದ್ದ ಕಳ್ಳನಿಗೆ ಬಿತ್ತು ಗೂಸಾ…!

ಸಿಲಿಂಡರ್​ ಕದ್ದು ಮನೆಯ ಗೇಟ್​ನಿಂದ ಹಾರುತ್ತಿದ್ದ ವೇಳೆ ಕಳ್ಳ ಮನೆ ಮಾಲೀಕರ ಕೈಗೆ ಸಿಕ್ಕಿದ್ದ ಘಟನೆಯೊಂದು ಅರ್ಜೆಂಟೀನಾದ ಬೂನಸ್​ ಉಪನಗರದಲ್ಲಿ ಸಂಭವಿಸಿದೆ. ಕಳ್ಳತನಕ್ಕೆ ಬಂದಿದ್ದ ಇಬ್ಬರು ಕಳ್ಳರಲ್ಲಿ ಓರ್ವ Read more…

ಸಣ್ಣ ಗಾತ್ರದ ದೇಹವೇ ಇವರಿಗೆ ವರದಾನ…!

ಕಳೆದ ವಾರವಷ್ಟೇ ಏಜಿಯನ್​ ಸಮುದ್ರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಟರ್ಕಿ ಸೇರಿದಂತೆ ಹಲವಾರು ಗ್ರೀಕ್​ ದ್ವೀಪಗಳು ಭಾರೀ ನಷ್ಟವನ್ನ ಅನುಭವಿಸಿವೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಈವರೆಗೆ ಸಾವನ್ನಪ್ಪಿದ್ದವರ Read more…

ದುಬೈನಲ್ಲಿ ಭಾರತೀಯ ವ್ಯಕ್ತಿಗೆ ಬಂಪರ್‌ ಬಹುಮಾನ

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್​ ಮಿಲೇಯನೇರ್ ಡ್ರಾದಲ್ಲಿ ಬಹ್ರೇನ್​ನಲ್ಲಿರುವ ಭಾರತೀಯ ವಲಸಿಗ 1 ಮಿಲಿಯನ್​ ಡಾಲರ್​ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮನಾಮಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ Read more…

ಭಾರತದ ಪ್ರಜೆಗಳಿಗೆ ಚೀನಾ ಪ್ರಯಾಣ ನಿರ್ಬಂಧ

ಬೆಂಗಳೂರು: ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ್ದ ಚೀನಾಗೆ ಇದೀಗ ಕೊರೊನಾ ಎರಡನೇ ಅಲೆಯ ಭೀತಿ ಆರಂಭವಾಗಿದೆ. ಇದರ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ದೇಶಗಳ ಪ್ರಜೆಗಳಿಗೆ ಚೀನಾ Read more…

ಅವಧಿಗೂ ಮುನ್ನ ಮಗು ಜನಿಸುವ ಕುರಿತು ಮಹತ್ವದ ಮಾಹಿತಿ ಬಹಿರಂಗ

ಗರ್ಭಧಾರಣೆ ಅವಧಿಯಲ್ಲಿ ಹೆಂಗಸರು ಹೆಚ್ಚಿನ ತಾಪಮಾನಕ್ಕೆ ಎಕ್ಸ್‌ಪೋಸ್ ಆದಲ್ಲಿ ಅವಧಿಗೂ ಮುಂಚೆ ಮಗು ಹುಟ್ಟುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜಾಗತಿಕ ತಾಪಮಾನ ಏರಿಕೆ, ಶಾಖದಲೆಗಳು ಹಾಗೂ Read more…

ಗಿಫ್ಟ್‌ ಬಾಕ್ಸ್‌ನಲ್ಲಿದ್ದ ಅಪ್ಪನ ಕಂಡು ಖುಷಿಯಾದ ಪುಟಾಣಿ ಕಂದ

ಯೋಧರೊಬ್ಬರು ತಮ್ಮ ಮಗಳಿಗೆ ತಮ್ಮನ್ನೇ ಗಿಫ್ಟ್‌ ಆಗಿ ಪ್ರೆಸೆಂಟ್ ಮಾಡಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಅಮೆರಿಕ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಟಿಮಾಟಿ ವ್ಹೈಟ್‌ ತಮ್ಮ ಸೇವೆಯಿಂದ ರಜೆ ಪಡೆದುಕೊಂಡು Read more…

ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..!

ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ. ಅದೇ ರೀತಿ ಯುಕೆಯ 23 ವರ್ಷದ Read more…

BIG NEWS: ಭಾರತದಲ್ಲಿರುವ ವಿದೇಶಿಗರಿಗೆ ಚೀನಾ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

ಭಾರತದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಚೀನಾ ಪ್ರವೇಶವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿದೆ. ಚೀನಿ ವೀಸಾ ಅಥವಾ ನಿವಾಸ ಪರವಾನಿಗಿ ಹೊಂದಿರುವ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಈ Read more…

ಕೊರೊನಾ ನಡುವೆಯೂ ಧಾರ್ಮಿಕ ಸಭೆಗೆ ಪಾಕ್​ ಸರ್ಕಾರ ಅಸ್ತು…!

ಧಾರ್ಮಿಕ ಮುಖಂಡರ ತೀವ್ರ ಒತ್ತಡದ ಬಳಿಕ ಕೊರೊನಾ ಸೋಂಕು ಹೆಚ್ಚಳದ ಹೊರತಾಗಿಯೂ ಪಾಕ್​ ಸರ್ಕಾರ ಲಾಹೋರ್​ನಲ್ಲಿ ಮೂರು ದಿನಗಳ ಸಭೆ ನಡೆಸಲು ತಬ್ಲಿಘಿ ಜಮಾತ್​ ಸದಸ್ಯರಿಗೆ ಅವಕಾಶ ನೀಡಿದೆ. Read more…

ಕುತೂಹಲ ತಡೆಯೋಕೆ ಆಗ್ತಿಲ್ಲ ಅಂದ್ರು ಸನ್ನಿ ಲಿಯೋನ್​​..!

ಅಮೆರಿಕದಲ್ಲಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ನಡೆಯುತ್ತಿದ್ದು ಇಡೀ ವಿಶ್ವವೇ ದೊಡ್ಡಣನ ಸಾರಥಿ ಯಾರಾಗ್ತಾರೆ ಅಂತಾ ಕಾದು ನೋಡ್ತಿದೆ. ಮುಂದಿನ ನಾಲ್ಕು ವರ್ಷಕ್ಕೆ ಟ್ರಂಪ್​ ಮತ್ತೊಮ್ಮೆ ಆಯ್ಕೆಯಾಗುತ್ತಾರಾ ಇಲ್ಲವೇ ಜೋ Read more…

ಫಲಿತಾಂಶಕ್ಕೂ ಮುನ್ನವೇ ಒಬಾಮಾ ದಾಖಲೆ ಮುರಿದ ಜೋ ಬಿಡೆನ್​​..!

ಬರಾಕ್​ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್​ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಬರಾಕ್​ ಒಬಾಮಾರ ಒಂದು ದಾಖಲೆಯನ್ನ ಚೂರು ಚೂರು ಮಾಡಿದ್ದಾರೆ. ಅಮೆರಿಕ ಚುನಾವಣೆಯಲ್ಲಿ 70.7 Read more…

ಗರ್ಭಿಣಿಯರಿಗೆ ಮಾಸ್ಕ್‌ ಕಡ್ಡಾಯ ನಿಯಮದಿಂದ ವಿನಾಯಿತಿ…?

ಕೊರೋನಾ ವೈರಸ್ ಕಾರಣದಿಂದಾಗಿ ನಮ್ಮ ದೈನಂದಿನ ಬದುಕುಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿವೆ. ಸಾಂಕ್ರಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಈ ಮಾರ್ಪಾಡುಗಳೇ ನಮಗೆ ಅಡಚಣೆಯಾಗಿಬಿಡುತ್ತಿವೆ. ಕೋವಿಡ್‌-19 ಕಾರಣದಿಂದಾಗಿ ಹೆರಿಗೆಗೆ Read more…

ಅರ್ಧ ಚಂದ್ರಾಕಾರ ತಲೆಯ ವಿಚಿತ್ರ ಹಾವು ಪತ್ತೆ

ವರ್ಜಿನಿಯಾದ ವನ್ಯಜೀವಿ ನಿರ್ವಹಣೆ ಸಂಸ್ಥೆ ಅರ್ಧಚಂದ್ರಾಕಾರ ತಲೆಯುಳ್ಳ ಹಾವೊಂದನ್ನ ಪತ್ತೆ ಮಾಡಿದೆ. ಅಲ್ಲದೇ ಇಂತಹ ಹಾವನ್ನ ಹಿಂದೆಂದೂ ಕಂಡಿರಲಿಲ್ಲ ಅಂತಾ ಹೇಳಿಕೆ ನೀಡಿದೆ. ಮಿಡ್ಲೋಥಿಯಾನ್​ ಎಂಬಲ್ಲಿ ಈ ವಿಚಿತ್ರ Read more…

ಅಮೆರಿಕಾ ಅಧ್ಯಕ್ಷರಿಗೆ ಸಿಗುತ್ತೆ ಇಷ್ಟು ಸಂಬಳ…!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ನಂತರ ಫಲಿತಾಂಶಗಳು ಬರಲಾರಂಭಿಸಿವೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮತ್ತು ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆಯಿದೆ. Read more…

ಮತದಾನಕ್ಕೆ ಅಡಚಣೆಯುಂಟು ಮಾಡಿದ ಸ್ಯಾನಿಟೈಸರ್

ಮತದಾರರ ಕೈಗೆ ಹಾಕಲಾಗಿದ್ದ ಸ್ಯಾನಿಟೈಸರ್‌ ಕಾರಣದಿಂದ ಬ್ಯಾಲೆಟ್‌ ಬಾಕ್ಸ್‌ಗಳು ಒದ್ದೆಯಾಗಿ ಕೆಟ್ಟು ನಿಂತ ಘಟನೆ ಅಮೆರಿಕ ಐಯೋವಾ ರಾಜ್ಯದಲ್ಲಿ ಜರುಗಿದೆ. ಇಂಥ ಘಟನೆಗಳ ಕಾರಣದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...