alex Certify India | Kannada Dunia | Kannada News | Karnataka News | India News - Part 223
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಮಾಜಿ ಸಿಎಂ ಕೆ. ಪಳನಿಸ್ವಾಮಿ ಮತದಾನ

ಚೆನ್ನೈ: ದೇಶದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇಂದು ಮತದಾನ ಆರಂಭವಾಗಿದೆ. 102 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. Read more…

ಪೋಷಕರೇ ಗಮನಿಸಿ: ಮಕ್ಕಳ ಆಹಾರ ನೆಸ್ಲೆ ಸೆರಿಲ್ಯಾಕ್ ನಲ್ಲಿ ಭಾರಿ ಪ್ರಮಾಣದ ಸಕ್ಕರೆ ಬಳಕೆ

ನವದೆಹಲಿ: ಮಕ್ಕಳ ಆಹಾರ ಉತ್ಪನ್ನದ ಪ್ರಮುಖ ಜಾಗತಿಕ ಕಂಪನಿಯಾಗಿರುವ ಸ್ವಿಜರ್ಲೆಂಡ್ ಮೂಲದ ನೆಸ್ಲೆ ಭಾರತದಲ್ಲಿ ಮಾರಾಟ ಮಾಡುವ ಸೆರಿಲ್ಯಾಕ್ ಆಹಾರದಲ್ಲಿ ಭಾರಿ ಪ್ರಮಾಣದ ಸಕ್ಕರೆ ಬಳಸುತ್ತಿದೆ. ಯುರೋಪ್ ದೇಶಗಳಿಗೆ Read more…

ದೇಶದ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ

ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆ 7 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. 21 ರಾಜ್ಯಗಳಲ್ಲಿ ಮೊದಲ ಹಂತದ ಚುನಾವಣೆ ಆರಂಭವಾಗಲಿದೆ. Read more…

BREAKING NEWS: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತ್ ಉಲ್ಲಾ ಖಾನ್ ಅರೆಸ್ಟ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಆಮ್ ಆದ್ಮಿ ಪಕ್ಷದ(ಎಎಪಿ) ಮತ್ತೊಬ್ಬ ಶಾಸಕ ಅಮಾನತ್ ಉಲ್ಲಾ ಖಾನ್ ಅವರನ್ನು ಬಂಧಿಸಿದೆ. ದೆಹಲಿ ವಕ್ಫ್ Read more…

ಫ್ಯಾನ್ಸಿ ಕಾರ್ ಗಳು: ದುಬೈ, ಲಂಡನ್ ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ಈ ಬಿಜೆಪಿ ಅಭ್ಯರ್ಥಿ ಆಸ್ತಿ 1400 ಕೋಟಿ ರೂ.

ಪಣಜಿ: ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಗೋವಾದ ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಭ್ಯರ್ಥಿ ಪಲ್ಲವಿ ಡೆಂಪೊ ಅವರು ತಮ್ಮ ಮತ್ತು ಅವರ ಪತಿ ಶ್ರೀನಿವಾಸ್ ಡೆಂಪೊ ಅವರ ಆಸ್ತಿ ಸುಮಾರು Read more…

BREAKING NEWS: ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ಜತ್ತ: ಮದುವೆಗೆಂದು ಹೊರಟಿದ್ದ ವೇಳೆ ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಜತ್ತ ಬಳಿಯ ನಾಗಾಸಪಾಟಾ Read more…

ಜೈನ ಧರ್ಮದ ಹೊಸ ಆಚಾರ್ಯರ ಪೀಠಾರೋಹಣ, ಸಂತ ಹುದ್ದೆ ವಹಿಸಿಕೊಂಡಿದ್ದಾರೆ ಸಮಯ ಸಾಗರ್ ಮಹಾರಾಜ್

ಜೈನ ಸಮುದಾಯಕ್ಕೆ ಹೊಸ ಆಚಾರ್ಯರ ನೇಮಕವಾಗಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಕುಂದಲ್‌ಪುರ ಯಾತ್ರಾ ಪ್ರದೇಶದಲ್ಲಿ ನಡೆದ ಈ ಐತಿಹಾಸಿಕ ಕ್ಷಣಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಜೈನ ಮುನಿಗಳಾದ ಸಮಯ Read more…

SHOCKING NEWS: ಕೈಗೆ ಕಚ್ಚಿದ ಹಾವನ್ನು ಕೊಂದು ಡಬ್ಬಿಯಲ್ಲಿ ತುಂಬಿ ಆಸ್ಪತ್ರೆಗೆ ತಂದ ಮಹಿಳೆ

ಹೈದರಾಬಾದ್: ಮಹಿಳೆಯೊಬ್ಬರು ತನ್ನ ಕೈಗೆ ಕಚ್ಚಿದ ಹಾವನ್ನು ಹೊಡೆದು ಸಾಯಿಸಿ ಡಬ್ಬಿಯಲ್ಲಿ ತುಂಬಿ ಆಸ್ಪತ್ರೆಗೆ ತಂದಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ವೆಂಕಟಾಪುರಂ ನಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆಂದು Read more…

ದೇಶದ ಜನಸಂಖ್ಯೆ 144 ಕೋಟಿ: ಚೀನಾ ಹಿಂದಿಕ್ಕಿ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿದ ದೇಶವಾಗಿ ಹೊರಹೊಮ್ಮಿದ ಭಾರತ

ನವದೆಹಲಿ: ದೇಶದ ಜನಸಂಖ್ಯೆ 144 ಕೋಟಿ ದಾಟಿದೆ. 142.5 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಹಿಂದಿಕ್ಕುವ ಮೂಲಕ ಭಾರತ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ಭಾರತದ Read more…

ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ NDA ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುವ ಎಲ್ಲಾ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಇದು ಬಿಜೆಪಿಯ ಕಾರ್ಯತಂತ್ರದ Read more…

ಭಯೋತ್ಪಾದಕರಿಂದ ಗುಂಡಿನ ದಾಳಿ: ಬಿಹಾರದ ಕಾರ್ಮಿಕನ ಹತ್ಯೆ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಈ ವರ್ಷ ಇದುವರೆಗೆ ಕಣಿವೆಯಲ್ಲಿ ಇದು ಮೂರನೇ ಘಟನೆಯಾಗಿದೆ Read more…

ದುಬೈ ಪ್ರವಾಹ: ಭಾರೀ ಮಳೆ ಹಿನ್ನಲೆ ಮಂಗಳೂರು-ದುಬೈ 4 ವಿಮಾನ ರದ್ದು

ಮಂಗಳೂರು: ಕಳೆದ 48 ಗಂಟೆಗಳಲ್ಲಿ ದುಬೈ ಮತ್ತು ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರಿ ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ನಾಲ್ಕು Read more…

ಕೊನೆ ಕ್ಷಣದಲ್ಲಿ ಯು ಟರ್ನ್: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಉಮೇದುವಾರಿಕೆ ಹಿಂಪಡೆದ ಗುಲಾಂ ನಬಿ ಆಜಾದ್

ನವದೆಹಲಿ: ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ(ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಅವರ ಪಕ್ಷ ತಿಳಿಸಿದೆ. ಅವರು ಜಮ್ಮು Read more…

ಪುತ್ರನ ಎದುರಲ್ಲೇ ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಅಮಾನುಷವಾಗಿ ಥಳಿಸಿದ ಪೊಲೀಸರು

ಜೈಪುರ: ಜೈಪುರದಲ್ಲಿ ವ್ಯಕ್ತಿಯನ್ನು ಆತನ ಮಗನ ಮುಂದೆ 3 ಪೊಲೀಸರು ಥಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನ್ನ ತಂದೆಯನ್ನು ಥಳಿಸದಂತೆ ಪೋಲೀಸ್‌ ಪಾದಗಳನ್ನು ಮುಟ್ಟಿ Read more…

EPFO ಖಾತೆದಾರರಿಗೆ ಗುಡ್ ನ್ಯೂಸ್: 1 ಲಕ್ಷ ರೂ.ವರೆಗೆ ವೈದ್ಯಕೀಯ ಚಿಕಿತ್ಸೆಗೆ ಮರುಪಾವತಿ ಸೌಲಭ್ಯ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ನಿಯಮ ಬದಲಾವಣೆ ಮಾಡಿದ್ದು, ಈಗ ನೀವು ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಭಾಗಶಃ ಹಿಂಪಡೆಯುವಿಕೆಯನ್ನು ಕ್ಲೈಮ್ ಮಾಡಬಹುದು. ಹಿಂಪಡೆಯಲು ಅಸ್ತಿತ್ವದಲ್ಲಿರುವ Read more…

ಶುಕ್ರವಾರ ಮೊದಲ ಹಂತದ ಚುನಾವಣೆ: 102 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

ನವದೆಹಲಿ: ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದ್ದು, 102 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ ಬಿದ್ದಿದೆ. ನಾಳೆ ಮನೆ ಮನೆ Read more…

ಈ ಕುಟುಂಬದಲ್ಲಿದ್ದಾರೆ ಒಟ್ಟು 1200 ಸದಸ್ಯರು, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ 350 ಮಂದಿ !

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 3 ದಿನಗಳು ಮಾತ್ರ ಬಾಕಿ ಇವೆ. ಏಪ್ರಿಲ್ 19 ರಂದು ಮತದಾರರು 102 ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತ Read more…

ಇಡೀ ಗ್ರಾಮವನ್ನೇ ನುಂಗಿ ಹಾಕಿದೆ ಸಮುದ್ರ; ಈ ಬಾರಿ ಮೂರು ಕಡೆಗಳಲ್ಲಿ ಮಾಡಬೇಕಿದೆ ಮತದಾನ….!

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಚುನಾವಣಾ ವಾತಾವರಣದ ನಡುವೆಯೇ ಒಡಿಶಾದ ಪೊಡಂಪೇಟ ಗ್ರಾಮದ ಮತದಾರರು ಪರದಾಡುವಂತಾಗಿದೆ. ಅವರ ಹಳ್ಳಿಯೇ ಈಗ ಚರ್ಚೆಯ Read more…

BREAKING NEWS: ಬಾಲರಾಮನ ಹಣೆಗೆ ಸೂರ್ಯ ತಿಲಕ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ ಆಚರಣೆ ನಡೆಯುತ್ತಿದೆ. ಬಾಲರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ಆಗಮಿಸಿದ್ದಾರೆ. ಇದೇ ವೇಳೆ ಸೂರ್ಯ ರಶ್ಮಿ ಬಾಲರಾಮನ Read more…

BIG NEWS: ಅಮೇಥಿಯಿಂದಲೂ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ರಾಹುಲ್ ಗಾಂಧಿ?

ಲಖನೌ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಉತ್ತರ ಪ್ರದೇಶದ Read more…

BREAKING NEWS: ಹೇಮಾ ಮಾಲಿನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮ

ನವದೆಹಲಿ: ಬಾಲಿವುಡ್ ನಟಿ, ಸಂಸದೆ ಹೇಮಾ ಮಾಲಿನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಕ್ರಮ Read more…

BIG NEWS: ಎನ್ ಕೌಂಟರ್ ನಲ್ಲಿ 29 ನಕ್ಸಲರನ್ನು ಸದೆಬಡಿದ ಭದ್ರತಾ ಪಡೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಇದೆ ವೇಳೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 29 ನಕ್ಸಲರನ್ನು ಹತ್ಯೆಗೈದಿದ್ದಾರೆ. ಛತ್ತೀಸ್ ಗಢದಲ್ಲಿ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕ್: ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಚಿನ್ನ, ಬೆಳ್ಳಿ ದರ

ನವದೆಹಲಿ: ಏರುಗತಿಯಲ್ಲಿ ಸಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಮಧ್ಯ ಪ್ರಾಚ್ಯದ ಸಂಘರ್ಷದ ನಡುವೆ ದೇಶದಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಸಾರ್ವಕಾಲಿಕ Read more…

ರಾಮನವಮಿ ದಿನವಾದ ಇಂದು ಅಯೋಧ್ಯೆ ರಾಮ ಲಲ್ಲಾಗೆ ‘ಸೂರ್ಯನ ತಿಲಕ’ದ ಹಿಂದಿದೆ ವಿಜ್ಞಾನದ ಈ ರಹಸ್ಯ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ ನಂತರ ರಾಮ್ ಲಲ್ಲಾ ಮೊದಲ ರಾಮನವಮಿ ಇಂದು ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ವಿಶೇಷವಾದದ್ದೇನೋ ನಜರುಗಲಿದೆ. ಮೂರ್ತಿಗೆ ಸೂರ್ಯ ಅಭಿಷೇಕ ಅಥವಾ ಸೂರ್ಯ Read more…

ತಲೆಗೆ 25 ಲಕ್ಷ ರೂ. ಬಹುಮಾನ ಹೊಂದಿದ್ದ ಪ್ರಮುಖ ನಕ್ಸಲ್ ನಾಯಕ ಸೇರಿ ಎನ್ ಕೌಂಟರ್ ನಲ್ಲಿ 29 ಮಾವೋವಾದಿಗಳ ಹತ್ಯೆ

ಕಾಂಕೇರ್: ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 29 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂವರು ಯೋಧರು ಗಾಯಗೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ Read more…

ಗುಂಡು ಹಾರಿಸಿದ ಇಬ್ಬರನ್ನು ಬಂಧಿಸಿದ ಬೆನ್ನಲ್ಲೇ ಸಲ್ಮಾನ್ ಖಾನ್ ಭೇಟಿಯಾದ ಸಿಎಂ ಶಿಂಧೆ

ಮುಂಬೈ: ಮುಂಬೈನಲ್ಲಿ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ಗುಂಡು ಹಾರಿಸಿದ ಇಬ್ಬರನ್ನು ಗುಜರಾತ್‌ ನ ಕಚ್‌ನ ಮಾತಾ ನೊ ಮಧ್ ಗ್ರಾಮದಲ್ಲಿ ಬಂಧಿಸಿದ ಗಂಟೆಗಳ Read more…

VIRAL NEWS : ಚಲಿಸುತ್ತಿದ್ದ ಬೈಕ್ ನಲ್ಲೇ ಹೋಂವರ್ಕ್ ಮಾಡಿದ ಬಾಲಕ ; ವಿಡಿಯೋ ವೈರಲ್

ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಏನಾದರೊಂದು ವೈರಲ್ ಆಗುತ್ತಲೇ ಇರುತ್ತದೆ. ಕೆಲವರು ಅಪಾಯಕಾರಿ ಸ್ಟಂಟ್ ಗಳನ್ನು ಮಾಡಿದರೆ ಇನ್ನೂ ಕೆಲವರು ಏನಾದರೂ ಹುಚ್ಚು ಸಾಹಸ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ Read more…

BIG NEWS: ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ನವದೆಹಲಿ: ನವದೆಹಲಿಯ ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ರೈಸಿನಾ ಹಿಲ್ಸ್ ಪ್ರದೇಶದಲ್ಲಿರುಬ ಗೃಹ ಸಚಿವಾಲಯದ ಕಚೇರಿಯಲ್ಲಿ ಬೆಂಕಿ Read more…

BREAKING : ‘UPSC’ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ |UPSC Civil Services Result 2023

ಕೇಂದ್ರ ಲೋಕಸೇವಾ ಆಯೋಗವು 2023 ರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ಸೈಟ್ upsc.gov.in ಪ್ರಕಟಿಸಿದೆ. ಅಂತಿಮ ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ ಸುತ್ತಿನಲ್ಲಿ ಹಾಜರಾದ Read more…

‘ನಾನು ಭಯೋತ್ಪಾದಕನಲ್ಲ’ : ಜೈಲಿನಿಂದಲೇ ಸಿಎಂ ‘ಅರವಿಂದ್ ಕೇಜ್ರಿವಾಲ್’ ಸಂದೇಶ..!

ನವದೆಹಲಿ : ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಸಂದೇಶ ಕಳುಹಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಮಂಗಳವಾರ ಹೇಳಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...