alex Certify Crime News | Kannada Dunia | Kannada News | Karnataka News | India News - Part 105
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ಯೆ ಸುದ್ದಿ ಕೇಳಿ ಬೆಚ್ಚಿ ಬಿದ್ದ ಜನ: ತಾಯಿಯನ್ನೇ ಕೊಂದು ಶವದ ಜೊತೆಯಲ್ಲೇ ಇದ್ದ ಪುತ್ರ

ಚಿಕ್ಕಮಗಳೂರು: ನಗರದ ಗೌರಿ ಕಾಲುವೆಯಲ್ಲಿ ನಡೆದ ಹತ್ಯೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿದೆ. 28 ವರ್ಷದ ಯುವಕನೊಬ್ಬ ತಾಯಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 48 ವರ್ಷದ ಸುಧಾ ಮೃತಪಟ್ಟವರು Read more…

ಗುಮಾನಿ ಮೇಲೆ ನೆರೆಮನೆ ಹುಡುಗಿ ಕೈಯನ್ನು ಕುದಿಯುತ್ತಿರುವ ಎಣ್ಣೆ ಬಾಣಲೆಗೆ ಅದ್ದಿದ ರಾಕ್ಷಸಿ

ಬಾಲೆಯ ಕೈಯನ್ನು ಕುದಿಯುತ್ತಿರುವ ಎಣ್ಣೆಯ ಬಾಣಲೆಗೆ ಹಾಕಿರುವ ದಾರುಣ ಘಟನೆ ಗುಜರಾತಿನ ಪಠಾಣ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೋಲಿಸ್ ಬಂಧಿಸಿದ್ದಾರೆ. ಆರೋಪಿ ಮತ್ತು ಬಾಲೆಯು ನೆರೆಹೊರೆಯವರಾಗಿದ್ದಾರೆ. ಆರೋಪಿ ಲಖಿ Read more…

ಅಪಾರ್ಟ್ಮೆಂಟ್ ನ 5ನೇ ಮಹಡಿಯಿಂದ ಜಿಗಿದು 52 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣು

ನವದೆಹಲಿ: 52 ವರ್ಷದ ಮಹಿಳೆಯೊಬ್ಬರು ಮಂಗಳವಾರ ದೆಹಲಿಯ ಅಪಾರ್ಟ್ಮೆಂಟ್ ನ ಐದನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಮುಖರ್ಜಿ ನಗರದ ನಿರಂಕಾರಿ Read more…

BIG NEWS: ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ; ಕೆಲಸದ ಮಹಿಳೆ ಮೇಲೆ ಕಾಮುಕ ಮಾಲೀಕನ ಅಟ್ಟಹಾಸ

ಬೆಳಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತ ಭಯದ ವಾತಾವರಣ ನಿರ್ಮಾಣವಾಗಿದೆ. ತೋಟದಲ್ಲಿ ಕೆಲಸಕ್ಕೆ ಇದ್ದ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರವೆಸಗಿರುವ ಕೃತ್ಯ Read more…

BIG NEWS: ಅರ್ಚಕರ ಮೇಲೆ ಮಾರಣಾಂತಿಕ ಹಲ್ಲೆ; ಮಚ್ಚು, ಲಾಂಗ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಹೆಣ್ಣೂರು ಅಂಡರ್ ಪಾಸ್ ಬಳಿ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ದಾಳಿ Read more…

ತಡರಾತ್ರಿ ವ್ಯಕ್ತಿಯಿಂದ ಘೋರ ಕೃತ್ಯ: ಪತ್ನಿ, ಮಗಳ ಹತ್ಯೆ

ಕಲಬುರಗಿ: ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ತಡರಾತ್ರಿ ಪತ್ನಿ ಮತ್ತು ಮಗಳನ್ನು ದಿಗಂಬರ್ ಎಂಬಾತ ಹತ್ಯೆ ಮಾಡಿದ್ದಾನೆ. ಜಗದೀಶ್ವರಿ(45), ಪ್ರಿಯಾಂಕಾ(11) ಮೃತಪಟ್ಟವರು ಎಂದು ಹೇಳಲಾಗಿದೆ. Read more…

ಶೂಟೌಟ್​ ಮತ್ತು ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಸೆರೆ

ಅರಮನೆ ನಗರಿಯನ್ನೇ ಬೆಚ್ಚಿ ಬೀಳಿಸಿದ್ದ ಶೂಟೌಟ್​ ಹಾಗೂ ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ದರೋಡೆಕೋರರಿಗೆ ಪಿಸ್ತೂಲ್​ ಮಾರಾಟ ಮಾಡಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. Read more…

ಕ್ಯಾಬ್​ ಚಾಲಕನಿಂದ ಅತ್ಯಾಚಾರ ಆರೋಪ: 24 ಗಂಟೆಯೊಳಗಾಗಿ ಆರೋಪಿ ಸೆರೆ

ಬೆಂಗಳೂರಿನಲ್ಲಿ ಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ಅಡಿಯಲ್ಲಿ ಜೀವನ್​ ಭೀಮಾ ನಗರ ಠಾಣೆಯ ಪೊಲೀಸರು ಕೇಸು ದಾಖಲಾದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆ Read more…

ವಿವಾಹಿತೆಯ ಮೇಲೆ ಪತಿಯ ಸಂಬಂಧಿ, ಸ್ನೇಹಿತನಿಂದಲೇ ಸಾಮೂಹಿಕ ಅತ್ಯಾಚಾರ….!

19 ವರ್ಷದ ವಿವಾಹಿತೆಯ ಮೇಲೆ ಪತಿಯ ಸಂಬಂಧಿ ಹಾಗೂ ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನು ಕೊಲೆಗೈದ ದಾರುಣ ಘಟನೆ ಪುಣೆಯ ಸಣ್ಣ ಗ್ರಾಮವೊಂದರಲ್ಲಿ ನಡೆದಿದೆ. Read more…

ಊಟ ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಹೊಡೆದು ಕೊಂದ ಪಾಪಿ

ರಾತ್ರಿ ಊಟ ಬಡಿಸಲು ನಿಧಾನ ಮಾಡಿದ್ದಕ್ಕೆ ಕೋಪಗೊಂಡ 70 ವರ್ಷದ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯು ಜಾರ್ಖಂಡ್​​ನ ಕುಂತಿ ಎಂಬಲ್ಲಿ ನಡೆದಿದೆ. ಕುಂತಿ ಪೊಲೀಸ್​ ಠಾಣೆ Read more…

BIG NEWS: ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ; ಆರೋಪಿಗಳ ವಿರುದ್ಧ 7 ಸೆಕ್ಷನ್ ಅಡಿ ಪ್ರಕರಣ ದಾಖಲು

ಬೆಂಗಳೂರು: ಬುರ್ಖಾಧಾರಿ ಮಹಿಳೆಗೆ ಡ್ರಾಪ್ ನೀಡಿದ್ದ ಬೈಕ್ ಸವಾರನ ಮೇಲೆ ಹಲ್ಲೆ ಹಾಗೂ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಪೊಲೀಸರು ಇಬ್ಬರ ವಿರುದ್ಧ Read more…

ಈ ಕಾರಣಕ್ಕೆ ಮಗಳನ್ನು ಹೊಡೆದು ಕೊಂದ ತಂದೆ

ಉತ್ತರ ಪ್ರದೇಶದ ಬಂಡಾದಲ್ಲಿ ತಂದೆಯೊಬ್ಬ, ಮಗಳ ಹತ್ಯೆ ಮಾಡಿದ್ದಾನೆ. ಘಟನೆ ಸಿಮೌನಿ ಚೌಕಿಯಲ್ಲಿ ನಡೆದಿದೆ. 22 ವರ್ಷದ ಹುಡುಗಿಯನ್ನು ತಂದೆ, ಕೋಲಿನಲ್ಲಿ ಹೊಡೆದು ಹತ್ಯೆ ಮಾಡಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ Read more…

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ

ತಮಿಳುನಾಡಿನ ಚೆನ್ನೈನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೊಬ್ಬ ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಪ್ರಕರಣ Read more…

BIG BREAKING: ಸರ್ಕಾರಿ ಕಚೇರಿಯಲ್ಲಿ ಮೂವರು ಮಹಿಳೆಯರ ಮೇಲೆ ತಲ್ವಾರ್ ನಿಂದ ದಾಳಿ

ಮಂಗಳೂರು: ಹಾಡಹಗಲೇ ಸರ್ಕಾರಿ ಕಚೇರಿಯಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದು, ಮೂವರು ಮಹಿಳೆಯರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿರುವ ಘಟನೆ ಮಂಗಳೂರಿನ ಕರಂಗಲಪಾಡಿ ಕಚೇರಿಯಲ್ಲಿ ನಡೆದಿದೆ. ಸರ್ಕಾರಿ ಕಚೇರಿಗೆ Read more…

ʼಪೊಲೀಸ್‌ʼ ಗೆ ಬ್ಲಾಕ್‌ ಮೇಲ್‌: ಅತ್ಯಾಚಾರದ ಆರೋಪ ಹೊರೆಸಿ ದುಡ್ಡು ಕೀಳಲು ಯತ್ನಿಸಿದ ಮಹಿಳೆ

ತನ್ನ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿಗಳನ್ನು ಕೀಳಲು ಮಹಿಳೆಯೊಬ್ಬಳು ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂದು ಹರಿಯಾಣ ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ. ರಾಜ್ಯದ ಹಿಸ್ಸಾರ್‌ Read more…

ಜಿಮ್ ಟ್ರೈನರ್ ಮೇಲೆ ಫೈರಿಂಗ್: ಜೆಡಿಯು ನಾಯಕ ರಾಜೀವ್ ಕುಮಾರ್ ಸಿಂಗ್, ಪತ್ನಿ ಅರೆಸ್ಟ್

ಪಾಟ್ನಾ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಜಿಮ್ ತರಬೇತುದಾರನಿಗೆ ಗುಂಡು ಹಾರಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಜೆಡಿಯು ನಾಯಕ ರಾಜೀವ್ ಕುಮಾರ್ ಸಿಂಗ್ ಮತ್ತು Read more…

BIG NEWS: ಆತ್ಮಹತ್ಯೆಗೆ ಶರಣಾದ 4 ತಿಂಗಳ ಗರ್ಭಿಣಿ; ಬಂಧನವಾಗುತ್ತಿದ್ದಂತೆ ಗಂಡನ ಒಂದೊಂದೇ ಅಸಲಿ ಮುಖ ಬಯಲು

ಬೆಳಗಾವಿ: ಪತಿಯ ಕಿರುಕುಳ ತಾಳಲಾರದೇ 4 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ ನಡೆದಿದೆ. ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 8 ತಿಂಗಳ Read more…

Shocking:‌ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ನಾಗರಿಕ ಸಮಾಜ ತಲೆತಗ್ಗಿಸುವಂತಹ ಮತ್ತೊಂದು ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮೀರತ್​ ಜಿಲ್ಲೆಯ ಪರಿಕ್ಷಿತ್​​ಗರ್​ Read more…

ಬೆಚ್ಚಿಬೀಳಿಸುವಂತಿದೆ 2020 ರಲ್ಲಿ ವರದಿಯಾದ ಬಾಲ್ಯ ವಿವಾಹಗಳ ಸಂಖ್ಯೆ

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ 2020ರಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸರಿಸುಮಾರು 40 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಎನ್.ಸಿ.ಆರ್​.ಬಿ. ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ Read more…

ಪ್ರೀತಿಸಿದ್ದಕ್ಕೆ ಯುವಕನಿಗೆ ಬೆಂಕಿ ಹಚ್ಚಿದ ಯುವತಿ ಕುಟುಂಬಸ್ಥರು: ಮಧ್ಯಪ್ರದೇಶದಲ್ಲಿ ನಡೆಯಿತು ಘೋರ ದುರಂತ

ಸಾಗರ್: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ 25 ವರ್ಷದ ಯುವಕನನ್ನು ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸಾಗರ್‌ ನ ನಾರ್ಯೋಲಿ ಪೊಲೀಸ್ Read more…

ತಂದೆಯಿಂದ ಹಣ ಪೀಕಲು ಮಾಡಬಾರದ ಕೆಲಸ ಮಾಡಿದ ಮಗ..!

20 ವರ್ಷದ ಯುವಕನೊಬ್ಬ ತಂದೆಯಿಂದ ಹಣ ಪೀಕುವ ಸಲುವಾಗಿ ತನ್ನನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ಸುಳ್ಳು ನಾಟಕವಾಡಿದ ಶಾಕಿಂಗ್​ ಘಟನೆಯೊಂದು ಬೆಂಗಳೂರಿನ ಕುರುಬರಹಳ್ಳಿಯ ಮಹಾಲಕ್ಷ್ಮೀಪುರಂನಲ್ಲಿ ಸಂಭವಿದೆ. ಸ್ಮಾರ್ಟ್ ಫೋನ್​ Read more…

ಯುವತಿಯರ ಸೋಗಿನಲ್ಲಿ ಪುರುಷರಿಗೆ ವಂಚನೆ; ನಗ್ನ ವಿಡಿಯೋ ಮೂಲಕ ಬ್ಲಾಕ್ ಮೇಲ್; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಯುವತಿಯರ ಸೋಗಿನಲ್ಲಿ ಫೇಸ್ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರನ್ನು ಸಂಪರ್ಕಿಸಿ ಬಳಿಕ ನಗ್ನ ವಿಡಿಯೋ ಕಾಲ್ ಮೂಲಕ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ Read more…

ಈ ವಿಡಿಯೋ ನೋಡಿದ್ರೆ ನೀವೆಂದೂ ಸೇವಿಸಲಾರಿರಿ ರಸ್ಕ್…!

ಚಹದ ಜೊತೆಗೆ ಬಿಸ್ಕಟ್​, ರಸ್ಕ್​ಗಳನ್ನು ಇಷ್ಟಪಡುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಮುಂದೆಂದೂ ನೀವು ರಸ್ಕ್​ ಸೇವನೆ ಮಾಡುವ ಬಗ್ಗೆ ಯೋಚನೆ ಮಾಡಲು ಕೂಡ Read more…

BIG NEWS: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ; ಪತ್ನಿ ವಿರುದ್ಧವೇ ದೂರು ದಾಖಲಿಸಿದ ಸಂಪಾದಕ

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸದಸ್ಯರ ಆತ್ಮಹತ್ಯೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ತನ್ನ ಪತ್ನಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ. Read more…

ಮೃತ ವೃದ್ಧೆಯನ್ನೂ ಬಿಡದ ಕಾಮುಕ: ಕೊಲೆಗೈದು ಅತ್ಯಾಚಾರವೆಸಗಿದ 19 ವರ್ಷದ ಪಾಪಿ…..!

60 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಬಳಿಕ ಮೃತ ದೇಹದ ಮೇಲೆ 19 ವರ್ಷದ ಯುವಕ ಅತ್ಯಾಚಾರಗೈದ ಅಮಾನವೀಯ ಘಟನೆ ರಾಜಸ್ಥಾನದ ಹನುಮಾನ್​ಗರ್​ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನ ಪೊಲೀಸರು Read more…

ಸ್ನೇಹಿತನನ್ನೇ ಕೊಂದು ದೇಹವನ್ನು ಸಂಪೂರ್ಣ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿ….!

ಸಾಲದ ರೂಪದಲ್ಲಿ ಪಡೆದಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. 17000 ರೂಪಾಯಿಗಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸ್ನೇಹಿತನನ್ನು Read more…

BIG NEWS: 500 ರೂಪಾಯಿಗಾಗಿ ಆತ್ಮಹತ್ಯೆ ನಿರ್ಧಾರ…! ಸಾವಿಗೂ ಮುನ್ನ ಮೊಬೈಲ್ ನಲ್ಲಿ ಬ್ಯುಸಿ; ವಿದ್ಯಾರ್ಥಿ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್

ಬೆಂಗಳೂರು: ಮಿಲಿಟರಿ ಶಾಲೆ ದ್ವಿತಿಯ ಪಿಯು ವಿದ್ಯಾರ್ಥಿ ರಾಹುಲ್ ಭಂಡಾರಿ ಆತ್ಮಹತ್ಯೆ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ರಾಹುಲ್ ತನ್ನ ತಂದೆಯ ಬಳಿ 500 Read more…

ಚಲಿಸುತ್ತಿರುವ ರೈಲಿನಲ್ಲಿ ಯುವಕನ ಹುಚ್ಚಾಟ: ವಿಡಿಯೋ ನೋಡಿ ನೆಟ್ಟಿಗರಿಗೆ ಶಾಕ್

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್​ಗಳನ್ನು ಪಡೆಯಬೇಕೆಂದು ಅನೇಕರು ಹುಚ್ಚಾಟಗಳನ್ನೇ ಮಾಡಿಬಿಡ್ತಾರೆ. ಇದು ಜೀವಕ್ಕೆ ಅಪಾಯಕಾರಿಯಾಗುವಂತಹ ಘಟನೆಗಳಿಗೂ ಕಾರಣವಾಗಬಹುದು.‌ ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಚಾಲ್ತಿಯಲ್ಲಿರುವ ವಿಡಿಯೋವೊಂದರಲ್ಲಿ ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ Read more…

ಗ್ರಾಪಂ ಸದಸ್ಯೆ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ, ಬೆನ್ನಲ್ಲೇ ಘೋರಕೃತ್ಯ

ಮಡಿಕೇರಿ: ಕೊಡಗು ಜಿಲ್ಲೆಯ ಚೆಂಬು ಗ್ರಾಮ ಪಂಚಾಯಿತಿ ರಾಮನಹಳ್ಳಿಯಲ್ಲಿ ಗ್ರಾಪಂ ಸದಸ್ಯೆ ಮೇಲೆ ಸಂಬಂಧಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ನಂತರ ಆತನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ Read more…

ತನ್ನನ್ನು ಬಿಟ್ಟು ಮತ್ತೊಬ್ಬ ಹುಡುಗನೊಂದಿಗೆ ಮಾತನಾಡಿದ್ದಕ್ಕೆ ಸ್ನೇಹಿತೆಗೆ ಇರಿದ ಬಾಲಕ

15 ವರ್ಷದ ಬಾಲಕಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದಿದ್ದ ಬಾಲಕನೊಬ್ಬ ಆಕೆಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಮಾತ್ರವಲ್ಲದೇ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...