ʼಏಲಕ್ಕಿ ಪುಡಿʼಯಿಂದ ಸಿಗುತ್ತೆ ಈ ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ

ಸುವಾಸನೆಭರಿತ ಏಲಕ್ಕಿ ಕೇವಲ ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.

ಸಮಯ ಸಿಕ್ಕಾಗ ಏಲಕ್ಕಿ ಪುಡಿಯನ್ನು ಮಾಡಿಟ್ಟುಕೊಂಡರೆ ಕೆಲ ಆರೋಗ್ಯ ಸಮಸ್ಯೆಗಳಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಅಂತ ತಿಳಿಯಿರಿ.

* ಬಾಯಿ ಹುಣ್ಣು ಗುಣವಾಗ ಬೇಕೆಂದರೆ ಏಲಕ್ಕಿ ಪುಡಿಗೆ ಜೇನುತುಪ್ಪ ಸೇರಿಸಿ ಸೇವಿಸಿ.

* ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ.

* ಹೊಟ್ಟೆ ನೋವಿಗೆ ಏಲಕ್ಕಿ ಪುಡಿಯನ್ನು ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

* ರಕ್ತಹೀನತೆ ಇದ್ದಲ್ಲಿ, ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ಅರಿಶಿಣದ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.

* ಆ್ಯಸಿಡಿಟಿ ನಿವಾರಣೆಗೆ ಒಂದೆರಡು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಕುಡಿದರೆ ಆ್ಯಸಿಡಿಟಿ ನಿವಾರಣೆಯಾಗುತ್ತದೆ.

* ಏಲಕ್ಕಿ ಪುಡಿ ಹಾಕಿ ಮಾಡಿದ ಕಷಾಯಕ್ಕೆ 4 ರಿಂದ 5 ಪುದೀನಾ ಎಲೆಯ ರಸ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.

* ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ವೃದ್ಧಿಸುತ್ತದೆ.

* ವಾತ, ಪಿತ್ತ, ಕಫ, ದಂತ ರೋಗ ಮತ್ತು ಬಾಯಿ ವಾಸನೆ ನಿವಾರಣೆಗೆ ಏಲಕ್ಕಿ ಉತ್ತಮ ಪರಿಹಾರ.

* ಏಲಕ್ಕಿಯ ಎಲೆ ಮತ್ತು ಬೇರಿನ ಕಷಾಯವನ್ನು ಸೇವಿಸಿದರೆ ಭೇದಿ ನಿಲ್ಲುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read