ಗದಗ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯೇ ಧಗ ಧಗನೆ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯ ಹೊರವಲಯದಲ್ಲಿ ನಡೆದಿದೆ.
ಈ ಕಾರು ಈರಣ್ಣ ಜಾಲಿಹಾಅಳ ಎಂಬುವವರಿಗೆ ಸೇರಿದ್ದಾಗಿದೆ. ಬ್ರಿಝಾ ಕಾರಿನಲ್ಲಿ ಎಂಜೀನ್ ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ಈರಣ್ಣ ಹಾಗೂ ಕುಟುಂಬದವರು ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಇಳಿದಿದ್ದಾರೆ. ಕ್ಷಣಾರ್ಧದಲಿ ಬೆಂಕಿ ಕಾರಿನ ತುಂಬ ವ್ಯಾಪಿಸಿದ್ದು, ಹೊತ್ತಿ ಉರಿದಿದೆ.
ಕಾರು ಕಣ್ಮುಂದೆಯೇ ಸಂಪೂರ್ಣವಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.