ನೀವು ಕಾರುಗಳಲ್ಲಿನ ಹಲವು ಸಾಹಸ ಕ್ರೀಡೆಗಳನ್ನು ನೋಡಿರಬಹುದು. ಅಸಾಧಾರಣ ಚಾಲನಾ ಕೌಶಲ್ಯದ ಹಲವಾರು ನಿದರ್ಶನಗಳನ್ನು ಕಂಡಿರಬಹುದು. ಚಾಲಕರ ಕೌಶಲ ನೋಡಿ ಮೂಕವಿಸ್ಮಿತರಾಗಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ಈಗ ವೈರಲ್ ಆಗಿದೆ.
ವೈರಲ್ ವಿಡಿಯೋವನ್ನು ಆರ್ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಬಂಡೆಯ ಮೇಲೆ ಕಾರು ಚಾಲನೆ ಮಾಡುವ ವಿಡಿಯೋ ಇದಾಗಿದೆ. ನೀವು ಸರಿಯಾದ ಟೈರ್‌ಗಳನ್ನು ಏಕೆ ಹೊಂದಿರಬೇಕು ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ.
ಈ ವಿಡಿಯೋ ನೋಡಿದರೆ ಮೈ ನವಿರೇಳುತ್ತದೆ. ಕಾರು ಬಂಡೆಯ ಮೇಲೆ ಸಾಗುವುದನ್ನು ನೋಡಬಹುದು. ಕಡಿದಾದ ದಾರಿಯಲ್ಲಿ ಕಾರು ಚಾಲಕ ಯಾವುದೇ ಅಳುಕು ಇಲ್ಲದೇ ಕಾರಿನ ಚಾಲನೆ ಮಾಡಿಕೊಂಡು ಹೋಗುವುದನ್ನು ನೋಡುತ್ತಿದ್ದರೆ ಮೈ ಝುಂ ಎನ್ನುತ್ತದೆ. ಕಾರಿಗೆ ಏನಾಗಿಬಿಡಬಹುದೋ ಎನ್ನುವ ಆತಂಕ ಕಾಡುತ್ತದೆ. ಕೊನೆಗೂ ಕಾರಿನ ಚಾಲಕ ಯಶಸ್ವಿಯಾಗಿ ಕಾರನ್ನು ಗುರಿಗೆ ತಲುಪಿಸುವುದನ್ನು ನೋಡಿ ನೆಮ್ಮದಿಯ ಉಸಿರು ಬಿಡುವಂತಾಗುತ್ತದೆ. ಈ ಚಾಲಕನ ಕೌಶಲ ನೋಡಿ ಹಲವಾರು ಕಮೆಂಟಿಗರು ಶಹಬ್ಬಾಸ್ ಎಂದಿದ್ದಾರೆ.
https://twitter.com/hvgoenka/status/1625099226333208578?ref_src=twsrc%5Etfw%7Ctwcamp%5Etweetembed%7Ctwte
https://twitter.com/hvgoenka/status/1625099226333208578?ref_src=twsrc%5Etfw%7Ctwcamp%5Etweetembed%7Ctwterm%5E1625099226333208578%7Ctwgr%5E91e62bbdef5b53eab6b6ddfaae5076eb39ec410c%7Ctwcon%5Es1_&ref_url=https%3A%2F%2Fwww.india.com%2Fviral%2Fcar-drives-straight-up-vertical-cliff-defying-gravity-netizons-amazed-watch-viral-video-5899405%2F