Video: ನಡು ರಸ್ತೆಯಲ್ಲೇ ಪ್ಲಾಸ್ಟಿಕ್ ಬಾಟಲ್ ಬಿಸಾಡಿದ ಕಾರ್ ಚಾಲಕ; ಪರ್ಫೆಕ್ಟ್ ಕಿಕ್ ಮೂಲಕ ಬುದ್ಧಿ ಕಲಿಸಿದ ಯುವತಿ

ರಸ್ತೆಯಲ್ಲಿ ಕಸ ಹಾಕಬಾರದು ಅನ್ನೋ ನಿಯಮವಿದೆ. ಆದರೂ ಕೆಲವರು ಈ ನಿಯಮವನ್ನ ಪಾಲಿಸುವುದೇ ಇಲ್ಲ. ಕಂಡ ಕಂಡಲ್ಲೆಲ್ಲ ಕಸ ಹಾಕಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ.

ಅದೇ ರೀತಿ ಕಾರ್‌ ಚಾಲಕನೊಬ್ಬ ಹೋಗುವಾಗ, ರಸ್ತೆ ಮಧ್ಯದಲ್ಲೇ ಕಸ ಹಾಕಿದ್ದಾನೆ. ಆ ಡ್ರೈವರ್‌ಗೆ ಯುವತಿಯೊಬ್ಬಳು ಸರಿಯಾಗಿ ಪಾಠ ಕಲಿಸಿದ್ದಾಳೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೆಕ್ಟ್ ಲೆವಲ್ ಸ್ಕಿಲ್ಸ್ ಅನ್ನೊ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ. ನೀವು ಗಮನಿಸುವ ಹಾಗೆ ರಸ್ತೆ ಪಕ್ಕ ನಿಲ್ಲಿಸಿರುವ ಬೈಕ್ ಪಕ್ಕ ಇಬ್ಬರು ಹುಡುಗಿಯರು ಮಾತನಾಡುತ್ತ ನಿಂತಿರುತ್ತಾರೆ.

ಅದೇ ಸಮಯದಲ್ಲಿ, ಅವರ ಮುಂದಿನಿಂದ ಕಾರೊಂದು ಹಾದು ಹೋಗುತ್ತೆ. ಕಾರು ಹಾಗೆ ಹೋಗುವಾಗ, ಕಾರಿನ ಚಾಲಕ ಬಾಟಲಿಯೊಂದನ್ನ ಅಲ್ಲೇ ಬಿಸಾಕುತ್ತಾನೆ.

ಅಲ್ಲಿ ನಿಂತಿದ್ದ ಯುವತಿಯರಿಗೆ ಆತ ಮಾಡಿದ್ದ ಆ ಕೆಲಸದಿಂದ ಸಿಟ್ಟು ಬರುತ್ತೆ. ತಕ್ಷಣವೇ ಆಕೆ ಆ ಬಾಟಲಿಯನ್ನ ಒದೆಯುತ್ತಾಳೆ. ಅದು ಕೂಡ ಎಷ್ಟು ನಿಖರವಾಗಿ ಅಂದರೆ ಆ ಖಾಲಿ ಬಾಟಲಿ ಪುನಃ ಕಾರಿನೊಳಗೆ ಹೋಗಿ ಬಿದ್ದಿರುತ್ತೆ.

ಆಕೆಯ ಈ ಪರ್ಫೆಕ್ಟ್ ಕಿಕ್‌ನಿಂದ ಅಲ್ಲೇ ಪಕ್ಕದಲ್ಲಿದ್ದ ಇನ್ನೊಬ್ಬ ಬೈಕ್ ಸವಾರ ಕೂಡ ಶಾಕ್ ಆಗಿ ಬಿಡುತ್ತಾನೆ. ಆಕೆ ಮಾಡಿದ್ದ ಕೆಲಸಕ್ಕೆ, ಹಾಗೂ ಚಾಲಕನಿಗೆ ಬುದ್ಧಿ ಕಲಿಸಿದ ರೀತಿಗೆ, ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ಸೂಚಿಸುತ್ತಾನೆ. ಅಷ್ಟೆ ಅಲ್ಲ ಆಕೆ ಮಾಡಿದ್ದ ಕೆಲಸ ನೋಡಿ ಚಾಲಕ ಕೂಡ ಇನ್ನುಮುಂದೆ ಎಲ್ಲಿಯೂ ಕಂಡ ಕಂಡಲ್ಲಿ ಬಾಟಲಿ ಬಿಸಾಕುವುದಿಲ್ಲ ಅಂದ ಹಾಗಾಗಿರುತ್ತೆ.

ನೆಟ್ಟಿಗರು ಈ ವಿಡಿಯೋ ನೋಡಿ ದಂಗಾಗಿದ್ದಾರೆ. ಅಷ್ಟೆ ಅಲ್ಲ ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ ಕೂಡ. ಸುನಿಲ್ ಚೌತಾ @ChowtaSunil @NextSkillslevelಗೆ ಪ್ರತಿಕ್ರಿಯಿಸಿ ’ವಾವ್ಹ್ ಇದೊಂದು ಪರ್ಫೆಕ್ಟ್ ಕಿಕ್’ ಎಂದು ಹೇಳಿದ್ದಾರೆ. ಇನ್ನೊರ್ವರು @arfikhan05 @NextSkillslevel ಇವರು ಈಕೆ ಕ್ರಿಸ್ಟಿಯಾನೋ ಸಹೋದರಿ ಎಂದು ಹೇಳಿದ್ದಾರೆ.

https://twitter.com/NextSkillslevel/status/1632067471149760514?ref_src=twsrc%5Etfw%7Ctwcamp%5Etweetembed%7Ctwterm%5E1632067471149760514%7Ctwgr%5Eabd61342de35f84c8e2f0d66208928450d185331%7Ctwcon%5Es1_&ref_url=https%3A%2F%2Fwww.india.com%2Fviral%2Fcar-driver-throws-empty-bottle-on-road-girl-kicks-it-back-inside-watch-viral-video-5929198%2F

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read