ನೋಡನೋಡ್ತಿದ್ದಂತೆ ಬಿದ್ದ ಭಾರೀ ತೂಕದ ಟ್ರಕ್; ಎದೆ ನಡುಗಿಸುವ ವಿಡಿಯೋ

ಎದೆ ನಡುಗಿಸುವ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯ ತಿರುವಿನಲ್ಲಿ ಬೃಹತ್ ಟ್ರಕ್ ರಸ್ತೆಯ ಮಧ್ಯಭಾಗವೇ ಬೀಳುವ ವಿಡಿಯೋ ಇದು. ಅಪಘಾತದ ವೇಳೆ ಕೆಲ ಕ್ಷಣಗಳಲ್ಲಿ ಬೈಕ್ ಸವಾರ ಪಾರಾಗಿದ್ದು ದೃಶ್ಯ ಎದೆ ನಡುಗಿಸಿದೆ.

ಟ್ರಕ್ ಹಿಂಬಾಲಿಸುವ ಕಾರ್ ನ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಮೊದಲಿಗೆ ಕಾರ್ ಟ್ರಕ್ಕನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ನಂತರ ಓರ್ವ ಬೈಕರ್ ಎಡಭಾಗದಿಂದ ಕಾರನ್ನು ಹಿಂದಿಕ್ಕುತ್ತಾನೆ ಮತ್ತು ಟ್ರಕ್ ನ ಮುಂದೆ ಹೋಗಲು ಪ್ರಯತ್ನಿಸುತ್ತಾನೆ. ಮೂರು ವಾಹನಗಳು ಮುಂದೆ ಸಾಗುತ್ತಿದ್ದಂತೆ, ಟ್ರಕ್ ತಿರುವಿನಲ್ಲಿ ನಿಯಂತ್ರಣ ಕಳೆದುಕೊಳ್ತಿದ್ದಂತೆ ಬಲಕ್ಕೆ ವಾಲುತ್ತಾ ರಸ್ತೆಗೆ ಬೀಳುತ್ತದೆ. ಬೈಕ್ ಸವಾರ ಮತ್ತು ಕಾರು ಚಾಲಕ ತಕ್ಷಣವೇ ಬ್ರೇಕ್ ಹಾಕಿ ನಿಲ್ಲುತ್ತಾರೆ.

ಜನನಿಬಿಡ ರಸ್ತೆಯಲ್ಲಿ ಭಾರೀ ತೂಕದ ವಾಹನವನ್ನು ಓಡಿಸುವುದು ಸಾಹಸವೆಂಬುದು ವಿಡಿಯೋ ತೋರಿಸಿದೆ.

https://twitter.com/ViciousVideos/status/1648189864628613120?ref_src=twsrc%5Etfw%7Ctwcamp%5Etweetembed%7Ctwterm%5E1648189864628613120%7Ctwgr%5E539b7aa554b4efd6359948b649bbb842d41bcde4%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fcarandbikeavoidbeingcrushedbytraileratcurvewatch-newsid-n492272174

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read