ಬೆಳಗಾವಿ: ಭಾರಿ ಮಳೆ ನಡುವೆಯೇ ಮರಕ್ಕೆ ಕಾರು ಡಿಕ್ಕಿಯಾದಗಿ ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಗ್ರಾಮದ ಬಳಿ ನಡೆದಿದೆ.
ಯರಗಟ್ಟಿಕಡೆಯಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬೆಳಗಾವಿಯ ಕರಿಕಟ್ಟಿ ಗ್ರಾಮದ ಸಚಿನ್ ಯಲ್ಲಪ್ಪ ಬೋರಿಮರದ (21) ಹಾಗೂ ಬಾಲಕೃಷ್ಣ ಬಸಪ್ಪ ಸುಲದಾಳ (19) ಎಂದು ಗುರುತಿಸಲಾಗಿದೆ. ಲಕ್ಕಪ್ಪ ಯಲ್ಲಪ್ಪ ಬೋರಿಮರದ (23) ಎಂಬುವವರು ಗಾಯಗೊಂಡಿದ್ದು, ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.