ಕ್ಯಾನ್ಸರ್ ಗೆ ಬಲಿಯಾದ ಪತಿ; ಭಯದಿಂದ ಮನೆಯೊಳಗೆ ಶವ ತರಲು ಬಿಡದ ಪತ್ನಿ

ಬಾಗಲಕೋಟೆ: ಕ್ಯಾನ್ಸರ್ ನಿಂದ ಮೃತಪಟ್ಟ ಪತಿಯ ಶವವನ್ನು ಪತ್ನಿ ಮನೆಯೊಳಗೆ ತರಲು ಬಿಡದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸೋಮವಾರಪೇಟೆಯಲ್ಲಿ ನಡೆದಿದೆ.

51 ವರ್ಷದ ಗುರು ಕಿತ್ತೂರು ಎಂಬುವವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಕ್ಯಾನ್ಸರ್ ಗೆ ಹೆದರಿ ಗುರು ಪತ್ನಿ ಹಾಗೂ ಕುಟುಂಬದವರು ಶವವನ್ನು ಮನೆಯೊಳಗೆ ತರಲು ಬಿಟ್ಟಿಲ್ಲ. ಬಳಿಕ ಸ್ಥಳೀಯರು ಮನೆಯ ಹೊರಗೆ ವಿದ್ಯುತ್ ಕಂಬಕ್ಕೆ ಶವವನ್ನು ಆಧಾರವಾಗಿರಿಸಿ ಅಂತಿಮ ವಿಧಿ-ವಿಧಾನ ನೆರವೇರಿಸಿದ್ದಾರೆ.

ಕ್ಯಾನ್ಸರ್ ನಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಗುರು ಕಿತ್ತೂರ್ ಇತ್ತೀಚೆಗೆ ಮನೆಬಿಟ್ಟು ಹೋಗಿದ್ದರು. ಬನಹಟ್ಟಿ ನಗರದ ವೈಭವ ಚಿತ್ರಮಂದಿರ ಬಳಿ ರಸ್ತೆಯ ಪಕ್ಕದಲ್ಲಿ ಜೂನ್ 11ರಂದು ಮೃತಪಟ್ಟಿದ್ದರು. ಗುರು ಕಿತ್ತೂರ ಮೃತಪಟ್ಟಿರುವುದು ತಿಳಿದು ಸ್ಥಳೀಯರು ಮನೆಗೆ ಶವ ತಂದಿದ್ದಾರೆ ಈ ವೇಳೆ ಪತ್ನಿ ಹಾಗೂ ಕುಟುಂಬದವರು ಮನೆಯೊಳಗೆ ಶವ ತರಲು ಬಿಟ್ಟಿಲ್ಲ. ಬಳಿಕ ಅಕ್ಕ-ಪಕ್ಕದವರು ಮನೆಯವರಿಗೆ ತಿಳಿ ಹೇಳಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದ್ದಾರೆ. ಬಳಿಕ ಶವ ತಂದು ಅಂತಿಮ ವಿಧಿವಿಧಾನ ನೆರವೇರಿಸಲು ಮನೆಯವರು ಅವಕಾಶ ಮಾಡಿಕೊಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read