100 ಬೋಧಕರ ನಿಯೋಜನೆ ರದ್ದು: ಕೂಡಲೇ ಮಾತೃ ಇಲಾಖೆಗೆ ಹಿಂತಿರುಗಲು ಸರ್ಕಾರ ಆದೇಶ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಚಿವಾಲಯ, ಆಯುಕ್ತರ ಕಚೇರಿ, ಬೇರೆ ಕಾಲೇಜುಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳ 100 ಬೋಧಕರ ನಿಯೋಜನೆಯನ್ನು ಸರ್ಕಾರ ರದ್ದುಪಡಿಸಿದ್ದು, ಕೂಡಲೇ ಮಾತೃ ಇಲಾಖೆಗೆ ಹಿಂತಿರುಗುವಂತೆ ಆದೇಶಿಸಿದೆ.

21 ಮಂದಿ ಪಾಲಿಟೆಕ್ನಿಕ್ ಕಾಲೇಜುಗಳ ಶಿಕ್ಷಕರು, 79 ಮಂದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ನಿಯೋಜನೆ ರದ್ದುಗೊಂಡವರ ಪೈಕಿ ಸೇರಿದ್ದಾರೆ. ಇವರಲ್ಲಿ 48 ಮಂದಿ ಸಚಿವಾಲಯ ಸೇರಿ ಬೋಧಕೇತರ ಕಾರ್ಯಗಳಿಗೆ ನಿಯೋಜನೆಗೊಂಡಿದ್ದಾರೆ. 31 ಮಂದಿ ಪ್ರಾಂಶುಪಾಲರಾಗಿದ್ದು, 31 ಮಂದಿ ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಬೋಧನಾ ಕಾರ್ಯಕ್ಕೆ ನಿಯೋಜನೆ ಪಡೆದುಕೊಂಡಿದ್ದಾರೆ.

ಸರ್ಕಾರಿ ಪದವಿ, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಬೋಧಕರ ಕೊರತೆಯಿದ್ದರೂ ಅನೇಕ ವರ್ಷಗಳಿಂದ ತರಗತಿಯಲ್ಲಿ ಪಾಠ ಮಾಡಬೇಕಿದ್ದ ನೂರಾರು ಪ್ರಾಧ್ಯಾಪಕರು, ಪ್ರಾಂಶುಪಾಲರನ್ನು ಅನ್ಯ ಕರ್ತವ್ಯ, ಅನ್ಯ ಕಾರ್ಯದ ನಿಮಿತ್ತ ಸಚಿವಾಲಯ, ಆಯುಕ್ತಾಲಯ, ಪ್ರಾದೇಶಿಕ ಕಚೇರಿ ಸೇರಿ ಇತರೆ ಕಚೇರಿಗಳು ಹಾಗೂ ಬೇರೆ ಕಾಲೇಜುಗಳಿಗೆ ನಿಯೋಜಿಸಲಾಗಿತ್ತು.

ಆಯಾ ಶೈಕ್ಷಣಿಕ ವರ್ಷದ ಬಳಿಕ ಮಾತೃ ಕಾಲೇಜಿಗೆ ಕರ್ತವ್ಯಕ್ಕೆ ವಾಪಸ್ ಆಗಬೇಕೆಂಬ ನಿಯಮವಿದ್ದರೂ ಪಾಲನೆ ಆಗುತ್ತಿರಲಿಲ್ಲ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸೂಚನೆ ಮೇರೆಗೆ ನಿಯೋಜನೆ ರದ್ದುಪಡಿಸಿ ಕೂಡಲೇ ಮಾತೃ ಇಲಾಖೆಗೆ ಮರಳುವಂತೆ ಆದೇಶಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read