ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹೀನ ಕೃತ್ಯ: ಹಿಂದೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯ ನಡೆಸದಂತೆ ಜೀವ ಬೆದರಿಕೆ

ಆಘಾತಕಾರಿ ಘಟನೆಯೊಂದರಲ್ಲಿ, ಆಸ್ಟ್ರೇಲಿಯಾದ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆದರಿಕೆ ಬಂದಿದೆ. ಆಸ್ಟ್ರೇಲಿಯಾ ಟುಡೇ ವರದಿಗಳ ಪ್ರಕಾರ, ಮೆಲ್ಬೋರ್ನ್‌ನಲ್ಲಿರುವ ಕಾಳಿ ಮಾತಾ ಮಂದಿರಕ್ಕೆ ಬೆದರಿಕೆ ಕರೆ ಬಂದಿದ್ದು, ತಮ್ಮ ಭಜನಾ ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಮೂರು ವಾರಗಳ ಹಿಂದೆ ಕಾಳಿ ಮಾತಾ ಮಂದಿರದ ಆಡಳಿತ ಮಂಡಳಿಯು ಮುಂಬರುವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾಗ ದೂರವಾಣಿ ಕರೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕರೆ ಮಾಡಿದವರ ಬೆದರಿಕೆಯನ್ನು ಕೇಳಿದ ನಂತರ ಆಘಾತಕ್ಕೊಳಗಾದ ದೇವಾಲಯದ ಅರ್ಚಕರಾಗಿರುವ ಭಾವನಾ, ಆಡಳಿತ ಮಂಡಳಿಯು ಕಾರ್ಯಕ್ರಮಕ್ಕಾಗಿ ತಿಂಗಳುಗಳಿಂದ ತಯಾರಿ ನಡೆಸುತ್ತಿದೆ ಮತ್ತು ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದೆ, ಆದ್ದರಿಂದ ಅದನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿ, ನನ್ನ ಕೆಲಸ ಕೇವಲ ಎಚ್ಚರಿಸುವುದು ಆಗಿದೆ. ಮುಂದಿನದ್ದು ನಿಮಗೆ ಬಿಟ್ಟಿದ್ದು ಎಂದಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಹಿಂದೂ ವಿರೋಧಿ ಬರಹಗಳನ್ನು ಬರೆಯುವ ಮೂಲಕವಿರೂಪಗೊಳಿಸಲಾಗಿತ್ತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read