ಕೆನರಾ ಬ್ಯಾಂಕ್ ನಲ್ಲಿ ಮಲೆಯಾಳಂ ಭಾಷೆಯ ಚೆಕ್ ವಿತರಣೆ: ಗ್ರಾಹಕರ ಆಕ್ಷೇಪ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಲಯಾಳಂ ಭಾಷೆಯ ಚೆಕ್ ವಿತರಿಸಲಾಗಿದೆ. ಇದರಿಂದಾಗಿ ಚೆಕ್ ನಲ್ಲಿ ಹೆಸರು ಇತರ ಮಾಹಿತಿ ಭರ್ತಿ ಮಾಡಲು ಸಾಧ್ಯವಾಗದೇ ಗ್ರಾಹಕರು ಪರದಾಡುವಂಥಾಗಿದೆ.

ಕರ್ನಾಟಕದಲ್ಲಿ ಅನ್ಯ ಭಾಷೆಯ ಚೆಕ್ ವಿತರಿಸುವುದು ಅಕ್ಷಮ್ಯವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥ ಬ್ಯಾಂಕ್ ವ್ಯವಸ್ತಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರ ಅಬ್ದುಲ್ ನವೀದ್ ಒತ್ತಾಯಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬ್ಯಾಂಕ್ ಮುಂದೆ ಕನ್ನಡಪರ ಸಂಘಟನೆಗಳೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ ಕುಲಕರ್ಣಿ, ಶಿರಾಳಕೊಪ್ಪ ಶಾಖೆಯಲ್ಲಿ ಮಲಯಾಳಂ ಭಾಷೆಯ ಚೆಕ್ ವಿತರಿಸಿದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read