ಜಿ20 ಶೃಂಗಸಭೆಗೆ ಬಂದ ಬಹುತೇಕ ನಾಯಕರು ವಾಪಸ್: ದೆಹಲಿಯಲ್ಲೇ ಉಳಿದ ಕೆನಡಾ ಪ್ರಧಾನಿ: ಕಾರಣ ಗೊತ್ತಾ..?

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೆಹಲಿಯನ್ನು ತೊರೆಯಲಿರುವ ಕೊನೆಯ ಜಿ20 ನಾಯಕರಾಗಲಿದ್ದಾರೆ.

ಅವರ ವಿಮಾನದ ತಾಂತ್ರಿಕ ಅಡಚಣೆಯ ಕಾರಣಕ್ಕಾಗಿ ದೆಹಲಿಯಲ್ಲೇ ಉಳಿಯುವಂತಾಗಿದೆ. ಬದಲಿ ವಿಮಾನದಲ್ಲಿ ಜಸ್ಟಿನ್ ಹಿಂತಿರುಗಿಸಲು ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಟ್ರೂಡೊ ಇಡೀ ದಿನ ಹೋಟೆಲ್‌ ನಿಂದ ಹೊರಬರಲಿಲ್ಲ ಎಂದು ತಿಳಿದುಬಂದಿದೆ.

ಅಂದ ಹಾಗೆ, ಈ ಸಮಸ್ಯೆಗಳನ್ನು ರಾತ್ರೋರಾತ್ರಿ ಸರಿಪಡಿಸಲಾಗುವುದಿಲ್ಲ, ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೆ ನಮ್ಮ ನಿಯೋಗವು ಭಾರತದಲ್ಲಿ ಉಳಿಯುತ್ತದೆ ಎಂದು ಟ್ರೂಡೊ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಜಿ20 ಶೃಂಗಸಭೆಯ ನಂತರ ಟ್ರೂಡೊ, ಸರ್ಕಾರಿ ಸಿಬ್ಬಂದಿ ಮತ್ತು ಪ್ರಧಾನ ಮಂತ್ರಿಯೊಂದಿಗೆ ಪ್ರಯಾಣಿಸುತ್ತಿದ್ದ ಪತ್ರಕರ್ತರು ಭಾನುವಾರ ರಾತ್ರಿ ಭಾರತವನ್ನು ತೊರೆಯಲು ಸಿದ್ಧರಾಗಿದ್ದರು. ಆದರೆ, ವಿಮಾನದ ತಾಂತ್ರಿಕ ಸಮಸ್ಯೆ ಕಾರಣ ಬದಲಿ ವಿಮಾನದ ವ್ಯವಸ್ಥೆ ಮಾಡುವವರೆಗೆ ದೆಹಲಿಯಲ್ಲೇ ಉಳಿಯುವಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಭಾರತವು ಕೆನಡಾದಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸುತ್ತಿರುವ ಮತ್ತು ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕುತ್ತಿರುವ ವಿಷಯವನ್ನು ಪ್ರಸ್ತಾಪಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read