ಮಗಳಿಂದ ಸ್ಪೂರ್ತಿ ಪಡೆದು 77 ಕೆಜಿ ತೂಕ ಇಳಿಸಿದ ತಂದೆ; ಇಂಟ್ರಸ್ಟಿಂಗ್ ಆಗಿದೆ ಸ್ಟೋರಿ

ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈ ನಿಟ್ಟಿನಲ್ಲಿ ಬೇಕಾದ ಬದ್ಧತೆ ಎಲ್ಲರಲ್ಲೂ ಇರುವುದಿಲ್ಲ. ತನ್ನ ಮಗಳಿಂದ ಸ್ಪೂರ್ತಿ ಪಡೆದು 77 ಕೆಜಿ ತೂಕ ಕಳೆದುಕೊಂಡ ವಿಚಾರವನ್ನು ಕೆನಡಾದ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ.

ಇಲ್ಲಿನ ಆಲ್ಬರ್ಟಾದ ಚಾರ್ಲ್ಸ್‌‌ಹೋಮ್ ಪಟ್ಟಣದ ನಿವಾಸಿ ಡೇವ್ ಮರ್ಫಿ, ತಮ್ಮ ಕಥೆಯನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ, ನಾಲ್ಕು ವರ್ಷದ ಮಗಳು ಆಟದ ಮೈದಾನದಿಂದ ಮನೆಗೆ ಓಡೋಣ ಎಂದು ಮಗಳು ಹೇಳಿದಾಗ, “ಸಾರಿ ಮಗಳೇ, ಅಪ್ಪನಿಗೆ ಓಡಲು ಆಗುವುದಿಲ್ಲ,” ಎಂದು ಹೇಳಿದಾಗ ಆಕೆಯ ಮೊಗದ ಮೇಲೆ ಮೂಡಿದ ಬೇಸರದಿಂದ ಡೇವ್‌ ಸ್ಪೂರ್ತಿ ಪಡೆದು ತೂಕ ಕಳೆದುಕೊಳ್ಳುವ ಪಯಣ ಆರಂಭಿಸಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ 77 ಕೆಜಿ ತೂಕ ಕಳೆದುಕೊಂಡಿದ್ದಾರೆ ಡೇವ್‌. ಅಫಘಾತವೊಂದರಲ್ಲಿ ತಮ್ಮ ಎಡಗಾಲಿನಲ್ಲಿದ್ದ ಸ್ನಾಯುವಿನ ಭಾಗವನ್ನು ಕಳೆದುಕೊಂಡಿದ್ದರೂ ಸಹ ಡೇವ್ ಕಠಿಣ ನಿಲುವಿನಿಂದಾಗಿ ಇದೀಗ 104 ಕೆಜಿಗೆ ಇಳಿದಿದ್ದಾರೆ.

1994ರಲ್ಲಿ ಒಟ್ಟಾವಾದ ಬೇಶೋರ್‌ ಶಾಪಿಂಗ್ ಕೇಂದ್ರದಲ್ಲಿ ಮೂವರು ಕಳ್ಳರು ಮಾಡಿದ ಹಲ್ಲೆಯ ಕಾರಣದಿಂದ ಡೇವ್‌ ಎಡಗಾಲಿಗೆ ಗಂಭಿರ ಗಾಯಗಳಾಗಿದ್ದವು. ಇದರಿಂದ ಅವರಿಗೆ ಆರಾಮಾಗಿ ನಡೆದಾಡಲು ಸಾಧ್ಯವಾಗಿರಲಿಲ್ಲ.

https://twitter.com/DaveMurYYC/status/1642910552283570182?ref_src=twsrc%5Etfw%7Ctwcamp%5Etweetembed%7Ctwterm%5E1642910552283570182%7Ctwgr%5E3551bccffe7171601b7c68cd8b73e6b6f6678326%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fcanadian-man-lost-more-than-170-lbs-conversation-with-daughter-8541601%2F

https://twitter.com/DaveMurYYC/status/1643608178637299712?ref_src=twsrc%5Etfw%7Ctwcamp%5Etweetembed%7Ctwterm%5E1643608178637299712%7Ctwgr%5E3551bccffe7171601b7c68cd8b73e6b6f6678326%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fcanadian-man-lost-more-than-170-lbs-conversation-with-daughter-8541601%2F

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read