ಕೆನಡಾದಿಂದ ಬೆಂಗಳೂರಿಗೆ ಮದುವೆ ಆಚರಣೆಗಾಗಿ ಬಂದಿದ್ದ ಭಾರತೀಯ ಮೂಲದ ದಂಪತಿಗಳ ಸಂಭ್ರಮಕ್ಕೆ ಬಣ್ಣದ ಬಾಂಬ್ ವಿಘ್ನ ತಂದಿದೆ. ವಧುವಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಕಿ ಮತ್ತು ಪಿಯಾ ದಂಪತಿಗಳು ಮದುವೆಯ ಫೋಟೋಶೂಟ್‌ನಲ್ಲಿ ಸಂಭವಿಸಿದ ದುರ್ಘಟನೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೆನಡಾದಿಂದ ಬೆಂಗಳೂರಿಗೆ ಮದುವೆಗಾಗಿ ಬಂದಿದ್ದ ದಂಪತಿಗಳು, ತಮ್ಮ ಮದುವೆಯ ಫೋಟೋಶೂಟ್‌ನ ಹಿನ್ನೆಲೆಯಲ್ಲಿ ಬಣ್ಣದ ಬಾಂಬ್‌ಗಳನ್ನು ಸ್ಫೋಟಿಸಲು ಯೋಜಿಸಿದ್ದರು. ಆದರೆ, ದುರದೃಷ್ಟವಶಾತ್ ಬಣ್ಣದ ಬಾಂಬ್ ನೇರವಾಗಿ ವಧುವಿನ ಮೇಲೆ ಸ್ಫೋಟಗೊಂಡಿದೆ. ಇದರಿಂದ ವಧುವಿಗೆ ಬೆನ್ನಿನ ಭಾಗದಲ್ಲಿ ಗಂಭೀರ ಸುಟ್ಟ ಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
“ಮದುವೆಗಳಲ್ಲಿ ಪಟಾಕಿ ಮತ್ತು ಬಣ್ಣದ ಬಾಂಬ್‌ಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ,” ಎಂದು ದಂಪತಿಗಳು ಹೇಳಿದ್ದಾರೆ. “ನಮ್ಮ ಮದುವೆಯಲ್ಲಿ ಸಂಭವಿಸಿದ ದುರಂತ ಬೇರೆಯವರಿಗೆ ಆಗಬಾರದು,” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.