ಸಾರ್ವಜನಿಕರೇ ಗಮನಿಸಿ : ‘ಮೆಸ್ಕಾಂ’ ಸಂಬಂಧಿತ ಸಮಸ್ಯೆಗಳಿಗೆ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ

ಉಡುಪಿ : ಪ್ರಸ್ತುತ ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ, ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್ಗಳನ್ನು, ವಿದ್ಯುತ್ ಕಂಬ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟುವುದು,, ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದು ಮತ್ತು ಬಟ್ಟೆ ಒಣಗಲು ವಿದ್ಯುತ್ ಕಂಪೆನಿಯ ಸಾಮಾಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು.

ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ 24*7 ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ 1912, ಗ್ರಾಹಕ ಸೇವಾ ಕೇಂದ್ರದ ವಾಟ್ಸಾಪ್ ನಂಬರ್ 9483041912 ಅನ್ನು ಸಂಪರ್ಕಿಸಬಹುದಾಗಿದೆ ಅಥವಾ ನನ್ನ ಮೆಸ್ಕಾಂ ಆಪ್ನ ಮುಖಾಂತರ ಮಾಹಿತಿ ನೀಡಬಹುದಾಗಿದೆ.

ಕಾರ್ಕಳ, ನಿಟ್ಟೆ ಹಾಗೂ ಹೆಬ್ರಿ ಉಪವಿಭಾಗದ ವ್ಯಾಪ್ತಿಯಲ್ಲಿ ಅತೀ ತುರ್ತು ಸಂದರ್ಭದಲ್ಲಿ ಈ ಕೆಳಕಂಡ ಉಪವಿಭಾಗಗಳ 24*7 ಸೇವಾ ಕೇಂದ್ರಗಳನ್ನು ಸಂಪರ್ಕಿಸಿ, ದೂರು ದಾಖಲಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕಾರ್ಕಳ ಉಪವಿಭಾಗದ ಕಾರ್ಕಳ ಶಾಖೆ-ಎ ಶಾಖಾಧಿಕಾರಿ ಮೊ.ನಂ: 9448289614, ಕಾರ್ಕಳ ಶಾಖೆ-ಬಿ ಶಾಖಾಧಿಕಾರಿ ಮೊ.ನಂ: 9448289630 ಹಾಗೂ ದೂ.ಸಂಖ್ಯೆ: 08258-230248, ಬೈಲೂರು ಶಾಖೆಯ ಶಾಖಾಧಿಕಾರಿ ಮೊ.ನಂ: 9448998711, ಹೊಸ್ಮಾರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882900, ಬಜಗೋಳಿ ಶಾಖೆಯ ಶಾಖಾಧಿಕಾರಿ ಮೊ.ನಂ: 9448998708, ಕಾರ್ಕಳ 24*7 ಸೇವಾ ಕೇಂದ್ರ ಮೊ.ನಂ: 9480833011 ಹಾಗೂ ದೂ.ಸಂಖ್ಯೆ: 08258-234248 ಮತ್ತು ಕಾರ್ಕಳ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 9448289501 ಹಾಗೂ ದೂ.ಸಂಖ್ಯೆ: 08258-230648 ಅನ್ನು ಸಂಪರ್ಕಿಸಬಹುದಾಗಿದೆ.

ನಿಟ್ಟೆ ಉಪ ವಿಭಾಗದ ವ್ಯಾಪ್ತಿಯಲ್ಲಿ ನಿಟ್ಟೆ ಶಾಖೆಯ ಶಾಖಾಧಿಕಾರಿ ಮೊ.ನಂ: 9448998709 ಹಾಗೂ ದೂ.ಸಂಖ್ಯೆ: 08258-281222, ಬೆಳ್ಮಣ್ ಶಾಖೆಯ ಶಾಖಾಧಿಕಾರಿ ಮೊ.ನಂ: 9448289633 ಹಾಗೂ ದೂ.ಸಂಖ್ಯೆ: 08258-274249, ಮುಂಡ್ಕೂರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882897, ಸಾಣೂರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882898, ನಿಟ್ಟೆಯ 24*7 ಸೇವಾ ಕೇಂದ್ರ ಮೊ.ನಂ: 8277882896 ಹಾಗೂ ನಿಟ್ಟೆ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 8277882890 ಹಾಗೂ ದೂ.ಸಂಖ್ಯೆ: 08258-200890 ಅನ್ನು ಸಂಪರ್ಕಿಸಬಹುದು.

ಹೆಬ್ರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಹೆಬ್ರಿ ಶಾಖೆಯ ಶಾಖಾಧಿಕಾರಿ ಮೊ.ನಂ: 9448289631 ಹಾಗೂ ದೂ.ಸಂಖ್ಯೆ: 08253-251230, ಅಜೆಕಾರು ಶಾಖೆಯ ಶಾಖಾಧಿಕಾರಿ ಮೊ.ನಂ: 9448289632 ಹಾಗೂ ದೂ.ಸಂಖ್ಯೆ: 08253-271109, ಮುದ್ರಾಡಿ ಶಾಖೆಯ ಶಾಖಾಧಿಕಾರಿ ಮೊ.ನಂ: 8277882899 ಹಾಗೂ ದೂ.ಸಂಖ್ಯೆ: 8253-200899, ಹೆಬ್ರಿಯ 24*7 ಸೇವಾ ಕೇಂದ್ರ ಮೊ.ನಂ: 9480841305 ಹಾಗೂ ದೂ.ಸಂಖ್ಯೆ: 08253-251069, ಹೆಬ್ರಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 9480833051 ಹಾಗೂ ದೂ.ಸಂಖ್ಯೆ: 08253-251079 ಮತ್ತು ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 8277882885 ಹಾಗೂ ದೂ.ಸಂಖ್ಯೆ: 08258-200448 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read