BIG NEWS: ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆಸ್ತಿ ಮೌಲ್ಯ ಎಷ್ಟು ಗೊತ್ತೇ?

ಚನ್ನಪಟ್ಟಣ: ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿ, ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.

ಸಿ.ಪಿ.ಯೋಗೇಶ್ವರ್ 27,94,06,412 ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, 7,25,20,470 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಶೀಲಾ ಹೆಸರಿನಲ್ಲೂ ಅಪಾರ ಪ್ರಮಾಣದ ಆಸ್ತಿ ಘೋಷಿಸಿದ್ದಾರೆ.

ಸಿ.ಪಿ ಯೋಗೇಶ್ವರ್ ಪತ್ನಿ ಶೀಲಾ ಹೆಸರಲ್ಲಿ 25,35,37,740 ಮೌಲ್ಯದ ಸ್ಥಿರಾಸ್ತಿ ಹಾಗೂ 7,10,80,556 ರೂ. ಮೌಲ್ಯದ ಚರಾಸ್ತಿ ಇದೆ. ಶೇಷಗಿರಿಹಳ್ಳಿ, ಕೋತನಹಳ್ಳಿ, ಕೆಂಜಿಗರಹಳ್ಳಿ, ಕೇತೋಹಳ್ಳಿ, ಹಂಪಾಪುರ ಗ್ರಾಮದಲ್ಲಿ ಸಿ.ಪಿ.ಯೋಗೇಶ್ವರ್ ಸ್ಥಿರಾಸ್ತಿ ಹೊಂದಿದ್ದಾರೆ.

ಯೋಗೇಶ್ವರ್ ಹೆಸರಲ್ಲಿ 22,02,47,157 ರೂ. ಮೌಲ್ಯದ ಕೃಷಿ ಭೂಮಿ ಹಾಗೂ ಪತ್ನಿ ಶೀಲಾ ಹೆಸರಿನಲ್ಲಿ 2,14,52,740 ರೂ. ಮೌಲ್ಯದ ಕೃಷಿ ಭೂಮಿ ಇದೆ. ಶೀಲಾ ಹೆಸರಿನಲ್ಲಿ 6.65 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿಯೂ ಇದೆ.

ಇನ್ನು ಸಿ.ಪಿ.ಯೋಗೇಶ್ವರ್ ಹೆಸರಿನಲ್ಲಿ 2,37,62,000 ಕೋಟಿ ರೂ. ಮೌಲ್ಯದ ಮನೆ ಹಾಗೂ ಪತ್ನಿ ಶೀಲಾ ಹೆಸರಿನಲ್ಲಿ 15.45 ಕೋಟಿ ರೂ. ಮೌಲ್ಯದ ಮನೆಗಳಿವೆ.
ಯೋಗೇಶ್ವರ್ ಹೆಸರಲ್ಲಿ 25,86,31,284 ರೂ. ಸಾಲವಿದ್ದು, ಪತ್ನಿ ಶೀಲಾ ಹೆಸರಿನಲ್ಲಿ 3,41,42,184 ರೂ. ಸಾಲವಿದೆ. ಯೋಗೇಶ್ವರ್ ಬಳಿ 250 ಗ್ರಾಂ ಚಿನ್ನಾಭರಣವಿದೆ. ಪತ್ನಿ ಶೀಲಾ ಬಳಿ 1 ಕೆಜಿ 500 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಇದೆ. ಸಾರ್ವಜನಿಕರಿಂದ ಶೀಲಾ 1 ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಸ್ವೀಕರಿಸಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಘೋಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read