ಬೆಂಗಳೂರು: ಉದ್ಯಮಿ ರಾಜಗೋಪಾಲ್ ಮೇಲೆ ಫೈರಿಂಗ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಶೂಟಿಂಗ್ ಪ್ರಾಕ್ಟಿಸ್ ಮಾಡುವಾಗ ಯುವಕ ಹಾರಿಸುದ್ದ ಏರ್ ಗನ್ ನಿಂದ ಹಾರಿದ ಗುಂಡು ಗುರಿತಪ್ಪಿ ಉದ್ಯಮಿ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಬಸವನಗುಡಿ ಪೊಲೀಸರು ಅಫ್ಜಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಯುವಕ ತನ್ನಿಂದಾದ ಅಚಾತುರ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಫ್ಲ್ಯಾಟ್ ಕಿಟಕಿ ಬಳಿ ಶೂಟಿಂಗ್ ಪ್ರ್ಯಾಕ್ಟಿಸ್ ಮಾಡುತ್ತಿದ್ದಾಗ ಗನ್ ನಿಂದ ಹಾರಿದ ಗುಂಡು ಗುರಿ ತಪ್ಪಿ ವಾಕಿಂಗ್ ಮಾಡುತ್ತಿದ್ದ ರಾಜಗೋಪಾಲ್ ಅವರ ಕತ್ತಿಗೆ ತಗುಲಿದೆ. ಗಾಯಾಳು ಉದ್ಯಮಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುವಕ ಅಫ್ಜಲ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆತನಿಗೆ ಯಾವುದೇ ದುರುದ್ದೇಶವಿರಲಿಲ್ಲ. ಅಲ್ಲದೇ ಆತನ ಬಳಿ ಯಾವುದೇ ಇತರ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ.
