VIRAL VIDEO | ಬುರ್ಜ್ ಖಲೀಫಾ ಮುಂದೆ ನಿಂತ ಕೇರಳ ನಂಬರ್ ಪ್ಲೇಟ್ ಹೊಂದಿರುವ ರೇಂಜ್ ರೋವರ್ ಕಾರ್

ಎನ್‌ಆರ್‌ಐಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ತಮ್ಮ ಐಷಾರಾಮಿ, ದುಬಾರಿ ಅಲಂಕಾರಿಕ ವಾಹನಗಳನ್ನು ಭಾರತೀಯ ರಸ್ತೆಗಳಲ್ಲಿ ಪ್ರದರ್ಶಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದಾಗ್ಯೂ ಭಾರತೀಯ ಉದ್ಯಮಿ ದಿಲೀಪ್ ಹೆಲ್‌ಬ್ರಾನ್ ಅವರು ತಮ್ಮ ರೇಂಜ್ ರೋವರ್ ಕಾರನ್ನು ಕೇರಳದಿಂದ ದುಬೈಗೆ ಸಾಗಿಸಿ ಸುದ್ದಿಯಾಗಿದ್ದಾರೆ.

ಅವರು ತಮ್ಮ ಐಷಾರಾಮಿ ಕಾರನ್ನ ಬುರ್ಜ್ ಖಲೀಫಾದ ಮುಂದೆ ನಿಲ್ಲಿಸಿ ಹೆಮ್ಮೆ ಪಟ್ಟಿದ್ದಾರೆ. ಈ ಸಂಗತಿಯನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ನಂತರ ಕ್ಲಿಪ್ ತ್ವರಿತವಾಗಿ ಗಮನ ಸೆಳೆದಿದೆ. ಅವರ ಇನ್ ಸ್ಟಾಗ್ರಾಂ ಖಾತೆ ಪ್ರಕಾರ, ದಿಲೀಪ್ ಹೆಲ್‌ಬ್ರಾನ್ ಪ್ರಾಪರ್ಟಿ ಡೆವಲಪರ್, ಕಾರ್ ಸಂಗ್ರಹಗಾರರು, ಗಾಲ್ಫ್ ಕ್ರೀಡಾಪಟು ಮತ್ತು ಟ್ರಾವೆಲರ್ ಎಂಬುದು ತಿಳಿದುಬಂದಿದೆ. ಕೇರಳದ ನಂಬರ್ ಪ್ಲೇಟ್‌ನೊಂದಿಗೆ ಬುರ್ಜ್ ಖಲೀಫಾ ಮುಂದೆ ಕಾರ್ ನಿಲ್ಲಿಸಿದ್ದಾರೆ.

“ಮನೆಯಿಂದ ದೀರ್ಘ ಪ್ರಯಾಣ. ಕೇರಳದ ನಮ್ಮ ಹಳೆಯ ರೇಂಜ್ ರೋವರ್ ನಮ್ಮನ್ನು ಭೇಟಿ ಮಾಡುತ್ತಿದೆ ಮತ್ತು ನಾವು ಅದಕ್ಕೆ ಸುತ್ತಮುತ್ತ ಇರುವುದನ್ನು ತೋರಿಸುವುದಲ್ಲಿ ನಿರತರಾಗಿದ್ದೇವೆ. 2011 ರಿಂದ ಇದು ನಮ್ಮ ಕುಟುಂಬದ ಭಾಗವಾಗಿದೆ” ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿದೇಶಗಳನ್ನು ಅನ್ವೇಷಿಸಲು ಉದ್ಯಮಿ ದಿಲೀಪ್ ತಮ್ಮ ಐಷಾರಾಮಿ SUV ಅನ್ನು ದುಬೈಗೆ ಸಾಗಿಸಿದ್ದಾರೆಂದು ತೋರುತ್ತದೆ. ಇದುವರೆಗೂ ವಿಡಿಯೋ 5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read